Advertisement
ಇದೆಲ್ಲದರ ಮಧ್ಯೆ ಈ ಬಾರಿ ಮೇ 29ರಂದು ಶಾಲೆಗಳು ಪುನರಾರಂಭವಾಗಲಿವೆ. ಖಾಸಗಿ ಶಾಲೆಗಳಿಗೆ ಬಹುತೇಕ ಪಾಲಕರು ಮಾರು ಹೋಗಿರುವ ಈ ಸಂದರ್ಭದಲ್ಲಿ ಸರಕಾರಿ ಶಾಲೆಗಳಲ್ಲೂ ತಯಾರಿ ಮಾಡಿಕೊಳ್ಳುತ್ತಿವೆ. ಅಲ್ಲದೇ ಮಕ್ಕಳು ಕೂಡ ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ.
Related Articles
Advertisement
ಅದೇ ರೀತಿಯಾಗಿ 2, 91,378 ಜತೆ ಸಮವಸ್ತ್ರಕ್ಕೂ ಬೇಡಿಕೆ ಸಲ್ಲಿಸಲಾಗಿದೆ. 1.46,117 ಗಂಡು, 1.45.261 ಹೆಣ್ಣು ಮಕ್ಕಳ ಬಟ್ಟೆಗೆ ಬೇಡಿಕೆ ಸಲ್ಲಿಸಲಾಗಿದೆ. ಅದರಂತೆ ಈಗಾಗಲೇ ಶೇ. 30ರಷ್ಟು ಬಟ್ಟೆ ಬಂದಿವೆ.
511 ಶೀರ್ಷಿಕೆಗಳು: ಒಟ್ಟು 34.71 ಲಕ್ಷ ಪುಸ್ತಕಗಳಲ್ಲಿ 511 ಶೀರ್ಷಿಕೆ ಪುಸ್ತಕಗಳಿವೆ. ಕನ್ನಡ, ಇಂಗ್ಲಿಷ್, ತೆಲುಗು, ಹಿಂದಿ, ಸಂಸ್ಕೃತ, ಮರಾಠಿ ಹಾಗೂ ಇತರೆ ಭಾಷಾ ಪುಸ್ತಕಗಳು ಸೇರಿದಂತೆ ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಪುಸ್ತಕಗಳು ಇರಲಿವೆ.
ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಜೂ.3ರೊಳಗೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿತರಣೆ ಮಾಡಲು ಎಲ್ಲ ಕ್ರಮ ಕೈಗೊಂಡಿದೆ. ಅಲ್ಲದೆ, ಪ್ರತಿ ತಾಲೂಕಿನ ಬಿಇಒಗಳಿಗೆ ನೇರವಾಗಿ ಪುಸ್ತಕಗಳು ತಲುಪಲಿವೆ. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಪ್ರತಿ 400 ವಿದ್ಯಾರ್ಥಿಗಳ ಸಂಖ್ಯೆ ಇರುವ ಶಾಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾರಂಭ ಆಯೋಜಿಸಿ ಮಕ್ಕಳಿಗೆ ಪುಸ್ತಕ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲ ತಾಲೂಕುಗಳಿಗೆ ಸೂಚನೆ ನೀಡಲಾಗಿದೆ.
* ಸೂರ್ಯಕಾಂತ ಎಂ. ಜಮಾದಾರ