ಉಡುಪಿ, ನ. 23: ಎಸ್.ಎಸ್. ಪ್ರಾಪರ್ಟೀಸ್ ಪ್ರೈ.ಲಿ. ಸಂಸ್ಥೆ ಉಡುಪಿ ನಗರದ ಕಿನ್ನಿಮೂಲ್ಕಿ ಮುಖ್ಯರಸ್ತೆಯಲ್ಲಿ ನಿರ್ಮಿಸುತ್ತಿರುವ ಪ್ರೀಮಿಯಂ ದರ್ಜೆಯ, ಅತ್ಯಾಕರ್ಷಕ ವಿನ್ಯಾಸದ “ಪ್ರಥಮ್ ನಕ್ಷತ್ರ’ ಸಂಪೂರ್ಣ ವಸತಿ ಸಮಚ್ಚಯದ ಬುಕ್ಕಿಂಗ್ ನ. 25ರಂದು ಆರಂಭಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಸಮಾರಂಭ ನಡೆಯಲಿದೆ.
ಉತ್ಕೃಷ್ಟ ಗುಣಮಟ್ಟ, ಶ್ರೇಷ್ಠ ದರ್ಜೆಯ ಸೌಲಭ್ಯಗಳೊಂದಿಗೆ ಕಿನ್ನಿಮೂಲ್ಕಿ ಮುಖ್ಯರಸ್ತೆ ಮತ್ತು ಅಜ್ಜರಕಾಡು ಪಾರ್ಕ್ ರಸ್ತೆಗಳ ಸಂಪರ್ಕ ಇರುವ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ “ಪ್ರಥಮ್ ನಕ್ಷತ್ರ’ ಪ್ರೀಮಿಯಂ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ.
ವಾಸ್ತುಪ್ರಕಾರ ನಿರ್ಮಾಣಗೊಳ್ಳುತ್ತಿದ್ದು ಬಾರ್ಬೆಕ್ಯೂ ಲಾಂಜ್, ತಳ ಅಂತಸ್ತಿನಲ್ಲಿ ಆಕರ್ಷಕ ಎಂಟ್ರೆನ್ಸ್ ಲಾಬಿ ಹೊಂದಿರುತ್ತದೆ. ಅಲ್ಲದೆ ಬ್ಯಾಂಕ್ವೆಟ್ ಏರಿಯಾಗಳು, ಆಧುನಿಕ ಜಿಮ್ನೆàಶಿಯಂ ಸೆಂಟರ್, ಇನ್‌ಡೋರ್ ಪ್ಲೇ ಏರಿಯಾ, ಕಿಡ್ಸ್ ಪ್ಲೇ ಝೋನ್, ಪಾರ್ಟಿ ಲಾನ್, ಕ್ಯಾಂಪಸ್ ಒಳಗೆ ಇಂಟರ್‌ಕಾಮ್ ಸೌಲಭ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ ಎಂದು ವಿನ್ಯಾಸಗಾರರು ತಿಳಿಸಿದ್ದಾರೆ.
ಐಎಸ್‌ಒ 456ರಂತೆ ಭೂಕಂಪ ನಿರೋಧಕ ಆರ್‌ಸಿಸಿ ಫ್ರೇಮ್ ನ ನಿರ್ಮಾಣ, ಹೊರಗೋಡೆಗಳಿಗೆ ಕೆಂಪುಕಲ್ಲುಗಳು ಮತ್ತು ಒಳಗೋಡೆಗಳಿಗೆ ಸಾಲಿಡ್ ಬ್ಲಾಕ್‌ಗಳ ಬಳಕೆ, ಬ್ರ್ಯಾಂಡೆಡ್ ಸ್ಯಾನಿಟರಿ ವೇರ್‌ಗಳ ಬಳಕೆ, ರೇರಾ ಕಾಯಿದೆಯಡಿ ನೋಂದಣಿ, ಅಪಾರ್ಟ್ ಮೆಂಟ್‌ಗಳ ನಿರ್ಮಾಣ ಒಂದು ಹಂತ ತಲುಪಿದ ಅನಂತರ ಬುಕ್ಕಿಂಗ್ ಆರಂಭ ಇವುಗಳಿಂದಾಗಿ ಎಸ್.ಎಸ್.ಪ್ರಾಪರ್ಟೀಸ್ ಪ್ರೈ.ಲಿ.ನ ಜನರ ವಿಶ್ವಾಸ ಗಳಿಸಿದೆ. ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಇಮೇಲ್ssproperties_manipal@yahoo.co.in ಅಥವಾ ವೆಬ್‌ಸೈಟ್ www.
ssproperties.in ಸಂಪರ್ಕಸಬಹುದು ಎಂದು ಎಸ್.ಎಸ್. ಪ್ರಾಪರ್ಟೀಸ್‌ನ ಪ್ರವರ್ತಕರು ತಿಳಿಸಿದ್ದಾರೆ.