Advertisement

ತುಂಗಭದ್ರಾ ಎಡದಂಡೆ 22ನೇ ವಿತರಣಾ ಕಾಲುವೆ ಹತ್ತಿರ ಬೋಂಗಾ: ಆತಂಕದಲ್ಲಿ ರೈತರು

07:52 PM Feb 04, 2022 | Team Udayavani |

ಗಂಗಾವತಿ: ತಾಲೂಕಿನ ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯ 22 ನೇ ವಿತರಣಾ ಕಾಲುವೆ ಹತ್ತಿರ ಶುಕ್ರವಾರ ಸಂಜೆ ಬೃಹತ್ ಗಾತ್ರದ ಎರಡು ಬೋಂಗಾ ಬಿದ್ದಿದ್ದು ಅಪಾರ ಪ್ರಮಾಣದ ನೀರು ವಿತರಣಾ ಕಾಲುವೆಯ ಮೂಲಕ ರೈತರ ಗದ್ದೆಗೆ ನುಗ್ಗಿದೆ. ಇದರಿಂದ ಎಡದಂಡೆ ಕಾಲುವೆಯ ವ್ಯಾಪ್ತಿಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಭತ್ತದ ನಾಟಿ ಮಾಡಿದ್ದು ಕೆಳಮಟ್ಟದಲ್ಲಿ ರೈತರು ಇನ್ನು ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಈ ಮಧ್ಯೆ ಗಂಗಾವತಿ ತಾಲೂಕಿನ ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಿಂದ 22ನೇ ವಿತರಣಾ(ಡಿಸ್ಟಿಬ್ಯೂಟರಿ)ಕಾಲುವೆಗೆ ನೀರು ಹರಿಯುವ ಸ್ಥಳದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೃಹತ್ ಗಾತ್ರದ ಬೋಂಗಾ ಬಿದ್ದಿದ್ದು ಬೋಂಗಾದ ಮೂಲಕ ಎಡದಂಡೆ ಕಾಲುವೆ ನೀರು ವಿತರಣಾ ಕಾಲುವೆಯ ಮೂಲಕ ರೈತರ ಗದ್ದೆಗೆ ನುಗ್ಗುತ್ತಿದ್ದು ಬೋಂಗಾದ ಗಾತ್ರ ದೊಡ್ಡದಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ವಿತರಣಾ ಕಾಲುವೆಯ ಮೂಲಕ ರೈತರ ನಾಟಿ ಮಾಡಿದ ಭತ್ತದ ಗದ್ದೆಗೆ ನುಗ್ಗುತ್ತಿದ್ದು ಇದರಿಂದ ನಾಟಿ ಮಾಡಿದ ಅಪಾರ ಪ್ರಮಾಣದಲ್ಲಿ ಹಾನಿಯಾಗುವ ಸಂಭವವಿದೆ.

ಎಸ್ಕೇಪ್ ಮೂಲಕ ನೀರು

ಎಡದಂಡೆ ಕಾಲುವೆ 22 ನೇ ವಿತರಣಾ ಕಾಲುವೆಯ ಹತ್ತಿರ ಬಿದ್ದಿರುವ ಬೋಂಗಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವುದನ್ನು ತಡೆಯಲು ಸಿದ್ದಿಕೇರಿ ಹತ್ತಿರ ಇರುವ ಎಸ್ಕೇಪ್ ತೆರೆದು ದುರುಗಮ್ಮನಹಳ್ಳಕ್ಕೆ ನೀರು ಬಿಡಲು ನಿರ್ಧರಿಸಲಾಗಿದ್ದು ಸ್ಥಳಕ್ಕೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ.

ಗಂಗಾವತಿ, ಕಾರಟಗಿ ಸಿಂಧನೂರು ಭಾಗದಲ್ಲಿ ಭತ್ತದ ಸಸಿ ನಾಟಿ ಮಾಡಿದ್ದು ಮಾನ್ವಿ, ಮಸ್ಕಿ, ರಾಯಚೂರು ಕೊನೆಯ ಭಾಗದ ರೈತರು ಇದೀಗ ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಮೇಲ್ಭಾಗದ ರೈತರು ನಾಟಿ ಮಾಡಿದ ಭತ್ತದ ಈಗಾಗಲೇ ಎರಡು ತಿಂಗಳಿನ ಬೆಳೆಯಾಗಿದೆ.
ಕೇಸರಟ್ಟಿ ಯಿಂದ ಜೀರಾಳ ಕೇಸಕ್ಕಿ ಹಂಚಿನಾಳ ಭಾಗದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಪ್ರತಿ ವರ್ಷ ಬೋಂಗಾ ಬೀಳುತ್ತಿದ್ದು ಇದರಿಂದ ಪ್ರತಿ ವರ್ಷ ಭತ್ತ ನಾಟಿ ಮಾಡುವ ರೈತರು ಆತಂಕಕ್ಕೆ ಒಳಗಾಗುವಂತಾಗಿದೆ.

Advertisement

ಶಾಸಕರ ಭೇಟಿ :

ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ಈಗಾಗಲೇ ಮೇಲ್ಭಾಗದ ರೈತರು ಭತ್ತವನ್ನು ನಾಟಿ ಮಾಡಿದ್ದಾರೆ. ಕೆಳಮಟ್ಟದ ರೈತರು ಇನ್ನೂ ನಾಟಿ ಕಾರ್ಯ ಮಾಡುತ್ತಿದ್ದು ಬೇಗನೆ ದುರಸ್ತಿ ಮಾಡುವಂತೆ ಸ್ಥಳದಲ್ಲಿದ್ದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ರೈತರು ಆತಂಕಕ್ಕೆ ಒಳಗಾಗಬಾರದು ಬೇಗನೆ ದುರಸ್ತಿ ಕಾರ್ಯವನ್ನು ಮಾಡಿ ಪುನಃ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next