ಮುಂಬಯಿ : ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 166.36 ಅಂಕಗಳ ನಷ್ಟದೊಂದಿಗೆ 31,095.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 51.85 ಅಂಕಗಳ ನಷ್ಟದೊಂದಿಗೆ 9,616.40 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,616.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಣದುಬ್ಬರ ಹಾಗೂ ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳು ಇಂದು ಸಂಜೆ ಹೊರಬೀಳಲಿರುವ ಕಾರಣ ಶೇರು ಪೇಟೆಯಲ್ಲಿಂದು ಎಚ್ಚರಿಕೆಯ ನಡೆ ಕಂಡು ಬಂತು.
ಇಂದು ಮಾರುಕಟ್ಟೆಯ ಒಟ್ಟಾರೆ ಬಲಾಬಲ ದುರ್ಬಲವಾಗಿತ್ತು. 3,051 ಶೇರುಗಳು ವಹಿವಾಟಿಗೆ ಒಳಪಟ್ಟರೆ 1,112 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದವು; 1,762 ಶೇರುಗಳು ಹಿನ್ನಡೆಗೆ ಗುರಿಯಾದವು; 177 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಲಾರ್ಸನ್, ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್, ಬಜಜ್ ಆಟೋ ಟಾಪ್ ಲೂಸರ್ ಎನಿಸಿಕೊಂಡವು. ಇನ್‌ಫೋಸಿಸ್, ಎಚ್‌ಯುಎಲ್, ಸನ್ ಫಾರ್ಮಾ, ಸಿಪ್ಲಾ, ಗೇಲ್ ಟಾಪ್ ಗೇನರ್ ಎನಿಸಿಕೊಂಡವು.