ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಎರಡನೇ ದಿನವೂ ಬಜೆಟ್ ರಾಲಿ ಮುಂದುವರಿಯಿತು.. ಇಂದು ಗುರುವಾರದ ವಹಿವಾಟನ್ನು ಸೆನ್ಸೆಕ್ಸ್ ನಾಲ್ಕು ತಿಂಗಳ ಗರಿಷ್ಠ ಮಟ್ಟವಾಗಿ 84.97 ಅಂಕಗಳ ಏರಿಕೆಯೊಂದಿಗೆ 28,227 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.85 ಅಂಕಗಳ ಏರಿಕೆಯೊಂದಿಗೆ 8,734.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.ಇಂದಿನ ವಹಿವಾಟಿನಲ್ಲಿ ಆಟೋ, ಕ್ಯಾಪಿಟಲ್ ಗೂಡ್ಸ್ ಮತ್ತು ಇನ್‌ಫ್ರಾ ಮಾತ್ರವಲ್ಲದೆ ಹೆಚ್ಚಿನೆಲ್ಲ ರಂಗಗಳ ಶೇರುಗಳು ಮುನ್ನಡೆಯನ್ನು ಕಂಡವು.
ಕಳೆದ ವರ್ಷ ಅಕ್ಟೋಬರ್ 4ರಂದು 28,334.55 ಅಂಕಗಳ ಎತ್ತರವನ್ನು ಕಂಡ ಬಳಿಕದ ನಾಲ್ಕು ತಿಂಗಳಲ್ಲಿ ಸೆನ್ಸೆಕ್ಸ್ ಕಂಡಿರುವ ಗರಿಷ್ಠ ಮಟ್ಟ (28,277) ಇಂದಿನದ್ದಾಗಿದೆ. ನಿನ್ನೆ ಬಜೆಟ್ ದಿನದಂದು ಸೆನ್ಸೆಕ್ಸ್ 487 ಅಂಕಗಳ ಅಮೋಘ ಏರಿಕೆಯನ್ನು ಕಂಡಿತ್ತು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಎನಿಸಿಕೊಂಡ ಶೇರುಗಳೆಂದರೆ ಡಾ. ರೆಡ್ಡಿ, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಕೋಲ್ ಇಂಡಿಯಾ, ಇನ್‌ಫೋಸಿಸ್. ಟಾಪ್ ಲೂಸರ್‌ಗಳೆಂದರೆ ಮಹೀಂದ್ರ, ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್ , ಬಜಾಜ್ ಆಟೋ, ಗೇಲ್.
ಇಂದು ಒಟ್ಟಾರೆಯಾಗಿ 3,101 ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,667 ಶೇಉಗಳು ಮುನ್ನಡೆ ಕಂಡವು; 1,287 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳು ಇದ್ದಲ್ಲೇ ಉಳಿದವು.
ಮುಂಬಯಿ ಶೇರು, 4 ತಿಂಗಳ ಗರಿಷ್ಠ ಮಟ್ಟಕ್ಕೆ, 84 ಅಂಕ ಏರಿಕೆ