Advertisement

ಏಶ್ಯನ್‌ ಪೇಟೆಯ ಸ್ಥಿರತೆ : ಮುಂಬಯಿ ಶೇರು 47 ಅಂಕಗಳ ಏರಿಕೆ

03:55 PM Jan 03, 2017 | udayavani editorial |

ಮುಂಬಯಿ : ಏಶ್ಯನ್‌ ಶೇರುಪೇಟೆಗಳಲ್ಲಿನ ಸ್ಥಿರತೆಯ ಪ್ರವೃತ್ತಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 47.79 ಅಂಕಗಳ ಏರಿಕೆಯೊಂದಿಗೆ 26,643.24 ಅಂಕಗಳ ಮಟ್ಟವನ್ನು ತಲುಪಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 12.75 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,192.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

ಇಂದಿನ ವಹಿವಾಟಿನಲ್ಲಿ ಕೋಲ್‌ ಇಂಡಿಯಾ, ಬಿಎಚ್‌ಇಎಲ್‌, ಎಕ್ಸಿಸ್‌ ಬ್ಯಾಂಕ್‌, ಗೇಲ್‌ ಮತ್ತು ಐಸಿಐಸಿಐ ಬ್ಯಾಂಕ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು. ಭಾರ್ತಿ ಏರ್‌ಟೆಲ್‌, ಹೀರೋ ಮೋಟೋ ಕಾರ್ಪ್‌, ಟಾಟಾ ಮೋಟರ್‌,  ಟಾಟಾ ಸ್ಟೀಲ್‌ ಮತ್ತು ವಿಪ್ರೋ ಟಾಪ್‌ ಲೂಸರ್‌ ಎನಿಸಿಕೊಂಡವು.

ಇಂದು ವ್ಯವಹಾರಕ್ಕೆ ಒಳಪಟ್ಟ ಒಟ್ಟು ಶೇರುಗಳ ಪೈಕಿ 1,800 ಶೇರುಗಳು ಮುನ್ನಡೆ ಸಾಧಿಸಿದವು. 953 ಶೇರುಗಳು ಹಿನ್ನಡೆಗೆ ಗುರಿಯಾದವು. 689 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next