ಮುಂಬಯಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆ ಹಂತದ ಮತದಾನಕ್ಕೆ ಮುನ್ನ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 48.63 ಅಂಕಗಳ ನಷ್ಟದೊಂದಿಗೆ 28,999.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 16.55 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,946.90 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದದ್ದೇ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಕ್ಕೆ ಕಾರಣವೆಂದು ತಿಳಿಯಲಾಗಿದೆ.
ಇಂದಿನ ವಹಿವಾಟಿನಲ್ಲಿ 1,631 ಶೇರುಗಳು ಹಿನ್ನಡೆಗೆ ಗುರಿಯಾದವು; 1,143 ಶೇರುಗಳು ಮುನ್ನಡೆ ಸಾಧಿಸಿದವು.
ಇಂದಿನ ಟಾಪ್ ಗೇನರ್‌ಗಳು : ಅದಾನಿ ಪೋರ್ಟ್, ಓಎನ್‌ಜಿಸಿ, ಬಿಪಿಸಿಎಲ್, ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್.
ಟಾಪ್ ಲೂಸರ್‌ಗಳು : ಹಿಂಡಾಲ್ಕೊ, ಟಾಟಾ ಸ್ಟೀಲ್, ಇನ್‌ಫೋಸಿಸ್, ಲೂಪಿನ್, ಎಕ್ಸಿಸ್ ಬ್ಯಾಂಕ್.