Advertisement

ಬಾಂಬ್‌ ಸ್ಕ್ವಾಡ್‌ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ

11:19 PM Jan 22, 2020 | Lakshmi GovindaRaj |

ಬೆಳಗಾವಿ: ಮಂಗಳೂರು ಬಾಂಬ್‌ ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಭದ್ರತೆ ಮತ್ತು ಬಾಂಬ್‌ ಸ್ಕ್ವಾಡ್‌ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಂಬ್‌ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿ ಆದಿತ್ಯರಾವ್‌, ಮಾನಸಿಕ ಅಸ್ವಸ್ಥನಿದ್ದು, ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೂಡ ಹುಸಿ ಬಾಂಬ್‌ ಕರೆ ಮಾಡಿದ್ದ. ಎರಡು ಪ್ರಕರಣಗಳಲ್ಲಿ ಈತನಿಗೆ ಶಿಕ್ಷೆ ಆಗಿದೆ. ಕೆಲಸ ಸಿಕ್ಕಿಲ್ಲ ಎನ್ನುವ ಖನ್ನತೆಯಿಂದ ಇಂಥ ಕೃತ್ಯ ಎಸಗಿದ್ದಾನೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ಪೊಲೀಸರು ಮೂರು ತಂಡ ರಚಿಸಿ ಆರೋ ಪಿಯ ಪತ್ತೆ ಹಚ್ಚಿದ್ದು, ಶೀಘ್ರವೇ ಈತನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗುವುದು. ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಎಲ್ಲ ಮಾಹಿತಿ ತಿಳಿದು ಬರಲಿದೆ. ಎನ್‌ಎಸ್‌ಜಿ ಎಲ್ಲ ವಿವರಗಳನ್ನು ಮಂಗಳೂರಿನಲ್ಲಿ ಪಡೆದುಕೊಂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next