Advertisement

‘ದಿ ಕೇರಳ ಸ್ಟೋರಿʼ 1st Day ಕಲೆಕ್ಷನ್‌:‌ ಮೊದಲ ದಿನವೇ ಕಾಶ್ಮೀರ್‌ ಫೈಲ್ಸ್‌ ಮೀರಿಸಿದ ಚಿತ್ರ

10:52 AM May 06, 2023 | Team Udayavani |

ಮುಂಬಯಿ: ಹಲವು ಕಾರಣಗಳಿಂದ ವಿವಾದಕ್ಕೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿʼ ಸಿನಿಮಾ ಶುಕ್ರವಾರ ( ಮೇ. 5 ರಂದು) ದೇಶದೆಲ್ಲೆಡೆ ತೆರೆಕಂಡಿದೆ. ಇತ್ತೀಚೆಗೆ ತೆರೆಗೆ ಬಂದ ಹಿಂದಿ ಸಿನಿಮಾಗಳಿಗೆ ಹೋಲಿಸಿದರೆ ಫಸ್ಟ್‌ ಡೇ ಕಲೆಕ್ಷನ್‌ ವಿಚಾರದಲ್ಲಿ ಪಾಸಿಟಿವ್‌ ಓಪನಿಂಗ್‌ ಪಡೆದುಕೊಂಡಿದೆ.

Advertisement

ಕೇರಳದ ಹಿಂದೂ ಯುವತಿಯ ಸುತ್ತ ಸಾಗುವ ಕಥೆ ಇದಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಆ ಬಳಿಕ  ಐಸಿಸ್ ಭಯೋತ್ಪಾದಕ ಸಂಘಟನೆಗೆ ಆಕೆ ಸೇರುತ್ತಾಳೆ. ಈ ಕಥೆ ಒಬ್ಬಳ ಕಥೆಯಲ್ಲ 32 ಸಾವಿರ ಕೇರಳ ಮಹಿಳೆಯರ ಕಥೆ ಎನ್ನುವುದನ್ನು ಚಿತ್ರ ತಂಡ ಮೊದಲು ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸೆನ್ಸಾರ್‌ ಬೋರ್ಡ್‌ ಸಿನಿಮಾದ 10 ದೃಶ್ಯಗಳನ್ನು ತೆಗೆದು ಹಾಕಲು ಹೇಳಿತ್ತು.

ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ಹಾಗೂ ಸಿನಿಮಾವನ್ನು ನಿಷೇಧಿಸಲು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ನ್ಯಾಯಮೂರ್ತಿ ಎನ್‌.ನಗರೇಶ್‌ ಹಾಗೂ ನ್ಯಾಯಮೂರ್ತಿ ಸೋಫಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದ ಬಳಿಕ ಸಿನಿಮಾ ಬಿಡುಗಡೆಗೆ ಯಾವುದೇ ತಡೆಯಿಲ್ಲದೇ ಸಿನಿಮಾ ರಿಲೀಸ್‌ ಆಗಿದೆ.

ವಿವಾದದಿಂದಲೇ ಸುದ್ದಿಯಾದ ಸುದೀಪ್ತೋ ಸೇನ್ ಸಿನಿಮಾ ಮೊದಲ ದಿನ ಎಷ್ಟು ಕಮಾಯಿ ಮಾಡಿದೆ ಎನ್ನುವ ವರದಿ ಹೊರಬಿದ್ದಿದೆ.  ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ ಚಿತ್ರ ಮೊದಲ ದಿನವೇ 7.50 ಕೋಟಿ ಗಳಿಸಿದೆ. ನಿಖರವಾಗಿ ಎಷ್ಟು ಕಲೆಕ್ಷನ್‌ ಮಾಡಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ಪಿವಿಆರ್‌, ಸಿನೆಪೊಲಿಸ್ ಹಾಗೂ ಇನಾಕ್ಸ್‌ ನಿಂದ 4 ಕೋಟಿ ರೂ. ಬಂದಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

Advertisement

ʼದಿ ಕೇರಳ ಸ್ಟೋರಿʼ ಮೊದಲ ದಿನ ಬಾಕ್ಸ್‌ ಆಫೀಸ್‌ ನಲ್ಲಿ ಕಲೆಕ್ಷನ್‌ ಮಾಡಿದ ಟಾಪ್‌ 5 ಸಿನಿಮಾಗಳೊಂದಿಗೆ ಸೇರಿದೆ.

ಶಾರುಖ್ ಖಾನ್ ಅವರ ʼಪಠಾಣ್ʼ (55 ಕೋಟಿ ರೂ.) ಸಲ್ಮಾನ್‌ ಖಾನ್‌ ಅವರ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ (15.81 ಕೋಟಿ ರೂ.), ತೂ ಜೂಟಿ ಮೈ ಮಕ್ಕಾರ್ ʼ (15.7 ಕೋಟಿ ರೂ.) ʼಭೋಲಾʼ ( 11.2 ಕೋಟಿ ರೂ.) ಕೇರಳ ಸ್ಟೋರಿ ಅಕ್ಷಯ್ ಕುಮಾರ್ ಅವರ ʼಸೆಲ್ಫಿʼ (ರೂ. 2.55 ಕೋಟಿ)  ಕಾರ್ತಿಕ್ ಆರ್ಯನ್ ಅವರ ʼಶೆಹಜಾದಾʼ (6 ಕೋಟಿ ರೂ.) ʼದಿ ಕಾಶ್ಮೀರ್ ಫೈಲ್ಸ್ʼ (3.5 ಕೋಟಿ ರೂ.) ಗಿಂತ ಉತ್ತಮ ಓಪನಿಂಗ್ ಪಡೆದುಕೊಂಡಿದೆ.

ಅದಾ ಶರ್ಮಾ,ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ, ವಿಜಯ್ ಕೃಷ್ಣ, ಪ್ರಣಯ್ ಪಚೌರಿ ಮುಂತಾದ ಕಲಾವಿದರು ನಟಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next