Advertisement
ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಕಾಣಿಸಿಕೊಂಡಿರುವ ʼಗದರ್-2ʼ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್ ಅವರು ಬಹು ಸಮಯದ ನಂತರ ಒಂದು ಹಿಟ್ ಕೊಟ್ಟಿದ್ದಾರೆ. ಅಪಾರ ಪ್ರೇಕ್ಷಕರನ್ನು ಥಿಯೇಟರ್ ಗೆ ʼಗದರ್-2ʼ ಕರೆದುಕೊಂಡು ಬರುತ್ತಿದೆ. ವೀಕೆಂಡ್ ಮಾತ್ರವಲ್ಲದೆ, ವೀಕ್ ಡೇಸ್ ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
Related Articles
Advertisement
“ʼಬಾರ್ಡರ್-2ʼ ಗಾಗಿ ಪಿ ದತ್ತಾ ಮತ್ತು ನಿಧಿ ದತ್ತಾ ಖ್ಯಾತ ಸ್ಟುಡಿಯೋಸ್ ಚರ್ಚೆಯನ್ನು ಆರಂಭವಾಗಿದೆ. ಸಿನಿಮಾದ 2ನೇ ಭಾಗವನ್ನು ತೆರೆಗೆ ತರುವ ಬಗ್ಗೆ ಮೊದಲ ಹಂತದ ಮಾತುಕತೆಗಳು ನಡೆಯುತ್ತಿವೆ. ಭಾರತೀಯ ಸೇನೆಯ ಇತಿಹಾಸದ ಕಥೆಯೊಂದು ಸಿನಿಮಾದಲ್ಲಿರಲಿದೆ. ಆ ಕಥೆ ಯಾವುದು ಎನ್ನುವುದು ಈಗಾಗಲೇ ಅಧಿಕೃತಗೊಳಿಸಲಾಗಿದೆ. ಬರವಣಿಗೆ ಹಂತ ಶೀಘ್ರದಲ್ಲಿ ಶುರುವಾಗಲಿದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
“ಸನ್ನಿ ಡಿಯೋಲ್ ಸಿನಿಮಾದಲ್ಲಿರಲಿದ್ದಾರೆ. ʼಬಾರ್ಡರ್ʼ ಸಿನಿಮಾದಲ್ಲಿದ್ದ ಹಳೆಯ ನಟರು ಇದರಲ್ಲಿ ಇರುವುದಿಲ್ಲ. ಇದರಲ್ಲಿ ತುಂಬಾ ಆ್ಯಕ್ಷನ್ ಇರಲಿದ್ದು, ಇದಕ್ಕಾಗಿ, ಈಗಿನ ಜನರೇಷನ್ ನ ಯುವ ನಟರನ್ನು ಆಯ್ದುಕೊಳ್ಳಲಾಗುತ್ತದೆ. ಹಳೆಯ ʼಬಾರ್ಡರ್ʼ ನಿಂದ ಸನ್ನಿ ಡಿಯೋಲ್ ಅವರು ಮಾತ್ರ ಇದರಲ್ಲಿ ಇರಲಿದ್ದಾರೆ. ʼಬಾರ್ಡರ್-2ʼ ಮಾತುಕತೆ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ” ಎಂದು ಮೂಲಗಳು ʼಪಿಂಕ್ ವಿಲ್ಲಾʼಗೆ ತಿಳಿಸಿದೆ.
ಸದ್ಯ ಸನ್ನಿ ಡಿಯೋಲ್ ʼಗದರ್-2ʼ ಯಶಸ್ಸಿನ ಸಂತಸದಲ್ಲಿದ್ದಾರೆ.