Advertisement

‘ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡಿ’:ಆಲಿಯಾ ಬಳಿ ಅವಕಾಶ ಕೇಳಿದ ನಟ ಶಾರುಖ್ ಖಾನ್

04:45 PM Jul 04, 2021 | Team Udayavani |

ಮುಂಬೈ : ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ನಟಿ ಹಾಗೂ ನಿರ್ಮಾಪಕಿ ಆಲಿಯಾ ಭಟ್ ಅವರ ಬಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಆಲಿಯಾ ಕೂಡ ರಿಯಾಕ್ಟ್ ಮಾಡಿದ್ದಾರೆ.

Advertisement

ಆಲಿಯಾ ಭಟ್​ ‘ಡಾರ್ಲಿಂಗ್ಸ್’ ಶೀರ್ಷಿಕೆಯ ಹೊಸ ಚಿತ್ರದಲ್ಲಿ ನಟನೆಯ ಜೊತೆ ನಿರ್ಮಾಪಕಿಯೂ ಆಗಿದ್ದಾರೆ. ಆ ಚಿತ್ರದ ಮೊದಲ ದಿನದ ಚಿತ್ರೀಕರಣದ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಶಾರುಖ್​ ಅವರು, ‘ಈ ಸಿನಿಮಾ ಆದ ಬಳಿಕ ನಿಮ್ಮ ಹೋಮ್​ ಪ್ರೊಡಕ್ಷನ್​ನಲ್ಲಿ ಬರುವ ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ.

ಶಾರುಖ್​ ಮಾಡಿದ ಟ್ವೀಟ್​ಗೆ ಆಲಿಯಾ ಕೂಡಲೇ ಉತ್ತರಿಸಿದ್ದಾರೆ. ‘ಹಹ್ಹಹ್ಹ.. ಇದಕ್ಕಿಂತ ಹೆಚ್ಚು ನಾನು ಏನ್ನನ್ನೂ ಕೇಳಲು ಸಾಧ್ಯವಿಲ್ಲ. ಆಯಿತು, ಒಪ್ಪಂದಕ್ಕೆ ಸಹಿ ಮಾಡಿದ್ದೇನೆ. ಲವ್​ ಯೂ ಮೈ ಫೇವರಿಟ್​’ ಎಂದು ಆಲಿಯಾ ಪ್ರತಿಕ್ರಿಯಿಸಿದ್ದಾರೆ.

Advertisement

ಅಂದಹಾಗೆ ಈ ತಾರೆಯರ ನಡುವೆ ನಡೆದ ಟ್ವೀಟ್ ಸಂಭಾಷಣೆ ಕೇವಲ ತಮಾಷೆಗಾಗಿ ಮಾತ್ರ. ಯಾಕಂದರೆ ಈ ಚಿತ್ರಕ್ಕೆ ಶಾರುಖ್​ ಪತ್ನಿ ಗೌರಿ ಖಾನ್​ ಕೂಡ ಹಣ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next