Advertisement

‘ಆತನಿಗೆ ಮೊದಲೇ ಒಂದು ಸಂಸಾರ ಇತ್ತು’…ಗಂಡನ ವಿರುದ್ಧ ನಟಿ ರಾಖಿ ಆರೋಪ

05:02 PM Feb 24, 2021 | Team Udayavani |

ಮುಂಬೈ : ಹಿಂದಿ ಬಿಗ್ ಬಾಸ್ 14 ನೇ ಸೀಸನ್ ಮುಗಿಸಿ ಹೊರ ಬಂದಿರುವ ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜತೆ ನಡೆದ ತನ್ನ ಮದುವೆ ಕುರಿತು ಆಘಾತಕಾರಿ ಸಂಗತಿಗಳನ್ನ ಹೊರಹಾಕಿದ್ದಾರೆ.

Advertisement

ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ರಾಖಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿತೇಶ್ ಹಾಗೂ ತನ್ನ ಮದುವೆ ಹೇಗೆ ನಡೆಯಿತು  ಎಂದು ಹೇಳಿಕೊಂಡಿದ್ದಾರೆ. ‘ಒಬ್ಬರು ನನ್ನ ಅಪಹರಣ ಮಾಡಲು ಮುಂದಾಗಿದ್ದರು. ಈ ವಿಚಾರ ನನಗೆ ಹಾಗೂ ನಮ್ಮ ತಾಯಿಗೆ ಭಯ ಹುಟ್ಟಿಸಿತು. ಈ ಆಪತ್ತಿನಿಂದ ಪಾರಾಗಲು ಚಿಂತಿಸುತ್ತಿರುವಾಗಲೇ ರಿತೇಶ್ ಜತೆ ಮದುವೆ ಮಾಡಲು ನಮ್ಮ ತಾಯಿ ಮುಂದಾದರು. ನಾನು ಕೂಡ ಈ ಮದುವೆಗೆ ಒಪ್ಪಿಕೊಂಡೆ’ಎಂದಿದ್ದಾರೆ.

ಮದುವೆ ಮುಂಚೆ ರಿತೇಶ್ ಜತೆ ಒಮ್ಮೆಯೂ ಮಾತಾಡಿರಲಿಲ್ಲ ಎಂದು ಹೇಳಿರುವ ರಾಖಿ, 2019 ರಲ್ಲಿ ಹೋಟೆಲ್ ವೊಂದರಲ್ಲಿ ನಮ್ಮ ಮದುವೆ ನಡೆಯಿತು. ಈ ವಿಷಯ ತಿಳಿದ ಕೆಲ ಪತ್ರಕರ್ತರು ಅಲ್ಲಿಗೆ ಧಾವಿಸಿದ್ದರಿಂದ ರಿತೇಶ್ ಹಿತ್ತಲ ಬಾಗಿಲಿನಿಂದ ಓಡಿದ. ಅವನು ಹಾಗೇಕೆ ಮಾಡಿದ ಎಂದು ನಂಗೆ ಅಂದು ತಿಳಿಯಲಿಲ್ಲ. ನಂತರ ಲಾಕ್ ಡೌನ್ ವೇಳೆ ಎಲ್ಲವೂ ನಡೆದು ಹೋಯಿತು ಎಂದಿದ್ದಾರೆ.

ರಿತೇಶ್ ಕುರಿತು ಮತ್ತೊಂದು ಆಘಾತಕಾರಿ ವಿಷಯ ರಿವೀಲ್ ಮಾಡಿರುವ ರಾಖಿ, ಆತನಿಗೆ ಈ ಮುಂಚೆಯೇ ಒಂದು ಸಂಸಾರ ಇರುವ ವಿಚಾರ ನನ್ನ ಮುಂದೆ ಮುಚ್ಚಿಟ್ಟಿದ್ದ ಎಂದಿದ್ದಾರೆ. ಆದರೆ, ರಾಖಿ ಸಾವಂತ್ ತುಂಬ ಸುಳ್ಳುಬುರುಕಿ ಎಂದು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಈ ಹಿಂದೆಯೂ ಸಾಕಷ್ಟು ಹಸಿಹಸಿ ಸುಳ್ಳುಗಳನ್ನು ಆಕೆ ಹೇಳಿದ್ದಳು. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕೂಡ ತನ್ನ ಮದುವೆ ಬಗ್ಗೆ ಕೆಲವೊಂದು ಸುಳ್ಳುಗಳನ್ನು ಹೇಳಿದ್ದಳು. ಈಗ ಮತ್ತೆ ಗಂಡನ ಮೇಲೆ ಗುರುತರವಾದ ಅಪವಾದ ಹೊರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next