Advertisement

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಯ ಬಾಲಿವುಡ್‌ ನಟಿ ಕುಂಕುಮ್‌ ನಿಧನ

04:22 PM Jul 29, 2020 | sudhir |

ಮುಂಬೈ: ಆರ್‌ ಪಾರ್‌, ಸಿಐಡಿ, ಕೊಹಿನೂರ್‌ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡ ನಾಯಕಿ ನಟಿ ಕುಂಕುಮ್‌ (86) ಅವರು ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ.

Advertisement

ಹಿರಿಯ ಬಾಲಿವುಡ್‌ ನಟಿ ಕುಂಕುಮ್‌ ಅವರು 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ಅಭಿನಯಿಸಿದ ಜನಪ್ರಿಯ ಹಾಡುಗಳಾದ ಕಭಿ ಆರ್‌ ಕಭಿ ಪಾರ್‌ ಮತ್ತು ಮೇರೆ ಮೆಹಬೂಬ್‌ ಕಯಾಮತ್‌ ಹೋಗಿ ಇಂದಿಗೂ ಸ್ಮರಣೀಯವಾಗುಳಿದಿದೆ.

ನವೇದ್‌ ಜಾಫ್ರಿ ಟ್ವಿಟ್ಟರ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದು, ನಾವು ಮತ್ತೂಂದು ರತ್ನವನ್ನು ಕಳೆದುಕೊಂಡಿದ್ದೇವೆ. ನಾನು ಚಿಕ್ಕವನಾಗಿದ್ದಾಗಿನಿಂದ ನಾನು ಅವರನ್ನು ತಿಳಿದಿದ್ದೇನೆ, ಅವರ ಅದ್ಭುತ ಕಲಾವಿದರು ಮತ್ತು ಅದ್ಭುತ ಮಾನವೀಯ ಗುಣವುಳ್ಳವರಾಗಿದ್ದರು ಎಂದಿದ್ದಾರೆ.

ಮಿಸ್ಟರ್‌ ಎಕ್ಸ್‌ ಇನ್‌ ಬಾಂಬೆ, ಮದರ್‌ ಇಂಡಿಯಾ, ಸನ್‌ ಆಫ್ ಇಂಡಿಯಾ, ಕೊಹಿನೂರ್‌, ಉಜಲಾ, ನಯಾ ದೌರ್‌, ಶ್ರೀಮಾನ್‌ ಫ‌ುಂಟೂಶ್‌, ಏಕ್‌ ಸಪೇರಾ ಏಕ್‌ ಲುಟೆರಾ, ಗಂಗಾ ಕಿ ಲಹರೇನ್‌, ರಾಜಾ ಔರ್‌ ರಂಕ್‌, ಆಂಖೇನ್‌, ಲಲ್ಕಾರ್‌, ಗೀತ್‌ ಮತ್ತು ಏಕ್‌ ಕುವರಾ ಏಕ್‌ ಕುವಾರಿ ಚಲನಚಿತ್ರಗಳು ನಟನೆಯಲ್ಲಿ ಜನಪ್ರಿಯತೆ ತಂದು ಕೊಟ್ಟಿತ್ತು.

Advertisement

ಅಷ್ಟೇ ಅಲ್ಲದೆ 1963ರಲ್ಲಿ ಮೊದಲ ಭೋಜ್‌ಪುರಿ ಚಿತ್ರ ಗಂಗಾ ಮಾಯ್ಯ ತೋಹೆ ಪಿಯಾರಿ ಚಾಧೈಬೊದಲ್ಲಿ ನಟಿಸಿದ್ದರು.
ಕುಂಕುಮ್‌ ಅವರು ಗುರುದತ್‌ ಅವರ ಚಲನಚಿತ್ರ ಆರ್‌ ಪಾರ್‌ಲ್ಲಿ ಕಭಿ ಆರ್‌ ಕಭಿ ಪಾರ್‌ ನಂತಹ ಜನಪ್ರಿಯ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಿಂದಿ ಚಲನಚಿತ್ರ ಪ್ರದರ್ಶನ ಎಂದು ಹೇಳಲಾಗುತ್ತದೆ. ಗುರುದತ್‌ ಅವರ ಸಿಐಡಿಯಲ್ಲಿ ಯೆ ಹೈ ಬಾಂಬೆ ಮೇರಿ ಜಾನ್‌ ಹಾಡಿನಲ್ಲಿಯೂ ಅವಳು ಕಾಣಿಸಿಕೊಂಡಿದ್ದಳು. ಮಧುಬನ್‌ ಮೇ ರಾಧಿಕಾ ನಾಚೆ ರೇ ಮತ್ತೂಂದು ಜನಪ್ರಿಯ ಹಾಡು, ಇದು ಕುಂಕುಮ್‌ ಅವರನ್ನು ನೃತ್ಯ ಪ್ರತಿಭೆಯಾಗಿ ಗುರುತಿಸುವಂತೆ ಮಾಡಿತ್ತು.
ನಟಿಯ ಅಂತಿಮ ಕ್ರಿಯಾ ವಿಧಿಗಳನ್ನು ಮಜಗಾಂವ್‌ ಶ್ಮಶಾನದಲ್ಲಿ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next