Advertisement

ಮುಂಬೈ ಹೈಕೋರ್ಟ್‌ ಮೆಟ್ಟಿಲೇರಿದ ಬಾಲಿವುಡ್‌ ನಟಿ ಕಂಗನಾ

09:59 PM Jul 21, 2021 | Team Udayavani |

ಮುಂಬೈ: ತಮ್ಮ ವಿರುದ್ಧದ ಪ್ರಕರಣವೊಂದರ ನ್ಯಾಯಾಲಯದ ವಿಚಾರಣೆಗೆ ತಡೆಯೊಡ್ಡುವಂತೆ ಕೋರಿ, ಬಾಲಿವುಡ್‌ ನಟಿ ಕಂಗನಾ ರಣಾವತ್‌, ಮುಂಬೈ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಬಾಲಿವುಡ್‌ನ‌ ಖ್ಯಾತ ಚಿತ್ರಸಾಹಿತಿ ಜಾವೇದ್‌ ಅಖ್ತರ್‌, ಅವರು ಕಂಗನಾ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮುಂಬೈನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆರಂಭಿಸಿದೆ. ಇದರ ವಿರುದ್ಧ ಮುಂಬೈ ಹೈಕೋರ್ಟ್‌ಗೆ ಮನವಿ ಸಲ್ಲಿಸಿರುವ ಕಂಗನಾ, ಜಾವೇದ್‌ ದಾಖಲಿಸಿರುವ ಪ್ರಕರಣದ ಆಧಾರದಲ್ಲಿ ಮ್ಯಾಜಿಸ್ಟ್ರೇಟ್‌ ಅವರು ಖುದ್ದಾಗಿ ಸಾಕ್ಷಿಗಳನ್ನು ಸಂಗ್ರಹಿಸಬೇಕಿತ್ತು. ಆದರೆ, ಅವರು ಪೊಲೀಸರ ಮೂಲಕ ಸಹಿ ಆಧಾರಿತ ಸಾಕ್ಷಿಗಳನ್ನು ಸಂಗ್ರಹಿಸಿ ವಿಚಾರಣೆಗೆ ಹೆಜ್ಜೆಯಿಟ್ಟಿದ್ದಾರೆ. ಹಾಗಾಗಿ, ಈ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಅವರು ಕೋರಿದ್ದಾರೆ.

ಇದನ್ನೂ ಓದಿ : ಬಳಸಿ ಬಿಸಾಡಿದ ಮಾಸ್ಕ್ ಗಳಿಂದ ಗೌನ್‌ ತಯಾರು! ಲಂಡನ್‌ನ ಫ್ಯಾಶನ್‌ ಡಿಸೈನರ್‌ ಕೈಚಳಕ

Advertisement

Udayavani is now on Telegram. Click here to join our channel and stay updated with the latest news.

Next