Advertisement

ಮೆರೀನ್ ಡ್ರೈವ್ ನಲ್ಲಿ ಕಾರಿನಲ್ಲಿ ಸುತ್ತಾಡುತ್ತಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಬಂಧನ

08:29 AM May 12, 2020 | Hari Prasad |

ಮುಂಬಯಿ: ಕೋವಿಡ್ ಸಂಬಂಧಿತ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತನ್ನ ಗೆಳೆಯನೊಂದಿಗೆ ಐಷಾರಾಮಿ ಕಾರಿನಲ್ಲಿ ಸುತ್ತಾಡುತ್ತಿದ್ದ ನಟಿ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ರವಿವಾರದಂದು ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಕಾರಣವಿಲ್ಲದೆ ಹೊರಗಡೆ ಸುತ್ತಾಡುವುದಕ್ಕೆ ನಿರ್ಬಂಧ ಇದೆ, ಆದರೆ ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಅಹಮ್ಮದ್ ಬಾಂಬೆ ಜೊತೆ ಮೆರೀನ್ ಡ್ರೈವ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು.

ಇದನ್ನು ಕಂಡು ಕರ್ತವ್ಯದಲ್ಲಿದ್ದ ಪೊಲೀಸರು ಪ್ರಶ್ನಿಸಿದಾಗ ಈ ಜೋಡಿ ಸರಿಯಾದ ಕಾರಣವನ್ನು ನೀಡಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಮರೈನ್ ಡ್ರೈವ್ ಠಾಣೆ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ಅವರ ಮೇಲೆ ಸೆಕ್ಷನ್ 269 ಮತ್ತು 188ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹಾಗೂ ಇವರು ಸುತ್ತಾಡುತ್ತಿದ್ದ ಬಿಎಂಡಬ್ಲ್ಯೂ ಕಾರನ್ನೂ ಸಹ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ನಟಿ ಹಾಗೂ ಮಾಡೆಲ್ ಆಗಿರುವ ಪೂನಂ ಪಾಂಡೆ ಅವರು ‘ನಶಾ’, ‘ಆ ಗಯಾ ಹೀರೋ’, ‘ದಿ ಜರ್ನಿ ಆಫ್ ಕರ್ಮ’ ಚಿತ್ರ ಸಹಿತ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next