Advertisement

ಬೋಲ್ಡ್‌ ಬ್ಯೂಟೀಸ್‌

06:15 AM Jun 22, 2018 | |

25 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡಬೇಕು ಎಂದು ನಂಬಿದ್ದ ಕಾಲವೊಂದಿತ್ತು. ಅದನ್ನೀಗ, ಹೆಣ್ಣುಮಕ್ಕಳೇ ಬದಿಗೆ ಸರಿಸಿದ್ದಾರೆ. ಸ್ವಲ್ಪ ಸಂಪಾದಿಸೋಣ, ಏನಾದ್ರೂ ಸಾಧಿಸೋಣ, ಆಮೇಲೆ ಮದುವೆಯಾಗೋಣ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ. 30 ದಾಟಿದ ಮೇಲೆ  ಮದುವೆ ಆದ್ರಾಯ್ತು, ಈಗ್ಲೆà ಏನವಸರ? ಎಂದೂ ಕೇಳುತ್ತಿದ್ದಾರೆ. ಸಮಾಜ ಇವರನ್ನು “ಬೋಲ್ಡ್‌ ಬ್ಯೂಟೀಸ್‌’ ಎಂದು ಕರೆಯುತ್ತಿದೆ. ಈ ಸ್ವತಂತ್ರ ಯೋಚನೆಯ ಅಕ್ಕತಂಗಿಯರ ಬದುಕು-ಯೋಚನೆಗಳ ಭಾವಲೋಕವನ್ನು ಇಲ್ಲಿ ತೆರೆದಿಡುವ ಪ್ರಯತ್ನ…

Advertisement

ನಾವು ಹುಡುಗಿಯರು, ಅದೇನೋ ಮಾರ್ದವ ಘಳಿಗೆಗಳು ಅಂತಾರಲ್ಲ ; ಅಂಥ ಸಂದರ್ಭಗಳಿಗೆ ಆಗಾಗ ಸಾಕ್ಷಿಗಳೂ, ಮಾಡೆಲ್‌ಗ‌ಳೂ ಫ‌ಲಾನುಭವಿಗಳೂ ಆಗ್ತಾ ಇರಿ¤àವಿ! ಬಾಲ್ಯದ ಪುಟ್ಟ ಪ್ರಪಂಚದ ಸಮಸ್ಯೆಗಳು, ನಮಗಾಗಿಯೇ ದೇವರು ಕಳುಹಿಸಿದಂತಿರುವ ಸ್ನೇಹಿತ, ನೆನೆದಾಕ್ಷಣ ಸಮಾಧಾನಕ್ಕೆ ದೊರಕುವ, ನಮಗಾಗಿಯೇ ಹೋರಾಡುವ ಹುಡುಗ, ಸಮಸ್ಯೆಗೆ ಪರಿಹಾರ ಹುಡುಕುವ ಹುಡುಗ… ಇಂಥವರೆಲ್ಲ ನಮ್ಮ ಪಾಲಿನ ಹೀರೋ ಆಗಿಬಿಟ್ಟಿರ್ತಾರೆ. ಶಾಲೆಯ, ಕಾಲೇಜಿನ ದಿನಗಳು ಮುಗಿದಾಗ, ಮನಸು ಬರಿದೇ, ಬರಿದು.

ಮುಂದಿನ ಪಯಣ ನೌಕರಿಯದ್ದು. ಯಾವುದೋ ಆಫೀಸಿನಲ್ಲಿ ಟಕ ಟಕ ಟಕ ಅಂತ ಕಂಪ್ಯೂಟರ್‌ ಕುಟ್ಟುವಾಗ ಅಚಾನಕ್‌ ಆಗಿ ಮೌಸ್‌ ಮೇಲೆ ಇರೋ ಕೈ ಮೇಲೆ, ಆರೇಳು ತಿಂಗಳ ಹಿಂದಷ್ಟೇ ಪರಿಚಯವಾದ, ವಿಪರೀತ ಕೇರ್‌ ತಗೊಳ್ಳುವ, ಸಭ್ಯ ಅಂತ ಐದಾರು ಬಾರಿ ಪ್ರೂವ್‌ ಮಾಡಿರುವ ಚಿಗುರು ಮೀಸೆಯ ಯುವಕ ಕೈಇಟ್ಟ ಅಂದ್ರೆ ಮುಗೀತು, ಚೆಲುವಿನ ಚಿತ್ತಾರ ಮನಸೊಳಗೆ! ಇನ್ಯಾವುದೋ ಕ್ಷಣ, ಇನ್ಯಾರೋ ಪರಿಚಿತ ಅದೊಂದು ಸಂತಸದ ಕ್ಷಣವನ್ನು ಹಂಚಿಕೊಂಡ್ರೆ, ಹಾಗೇ ಬರಸೆಳೆದು ಭುಜವನ್ನು ಅವನ ಎದೆಗೊತ್ತಿಕೊಂಡ್ರೆ, ಪುಳಕ… 

ಇನ್ನೆಲ್ಲೋ ಎಡವಿಬಿದ್ದಾಗ ಅದ್ಯಾರೋ ಮನಸೂರೆ ಮಾಡುವ ರಾಜಕುಮಾರ ಓಡಿಬಂದು ಆಸರೆ ಆದ್ರೆ ಮನಸೊಳಗೆ ಹಿತವಾದ ತಂಗಾಳಿ! ಜೀವನದ ಅನೇಕ ಭೇಟಿಗಳಲ್ಲಿ , ಮತ್ಯಾವುದೋ ಒಂದು ಕ್ಷಣ, ಇನ್ಯಾರೋ ಮನ ಕದಿವ ಹುಡುಗನೊಬ್ಬನ ಜೊತೆ ಅರಿಯದೇ ಕಣ್‌ಕಣ್‌ ಬೆಸೆದಾಗ, ಮನಸು ಅವನ ತೆಕ್ಕೆಗೆ ಜಾರಿಬಿಟ್ಟಿರುತ್ತೆ.  ದುಃಖದ ಘಳಿಗೆಗಳಲ್ಲಿ ಬರಸೆಳೆದು ಅಪ್ಪಿ ಸಾಂತ್ವನ ಹೇಳುವ ಗೆಳೆಯ, ಮತ್ತೂಂದು ಹಂತದಲ್ಲಿ ಪರಿಚಯವಾಗುವ ಆತ್ಮೀಯ, ಹಾಗೊಂದು ಆಸೆ ಮುಂದಿಟ್ಟಾಗ, “ನಿನ್ನ ಬೆರಳ ಉಗುರಿಗೆ ಬಣ್ಣದ ನೇಲ್‌ ಪಾಲಿಷ್‌ ಹಚ್ಚಲೇ’ ಅಂತ ಪ್ರೇಮ ನಿವೇದಿಸಿಕೊಂಡಾಗ ರಾಧಿಕೆಯರಾಗಿಬಿಡ್ತೇವೆ.

ಅವನೂ ಅಷ್ಟೇ. ಒಂದು ಮಧುರ ಕಂಪನಕ್ಕೆ ಒಳಗಾಗಿರ್ತಾನೆ. ಇವೆಲ್ಲಾ ಅಚಾನಕ್‌ ಆಗಿ ನಡೆದುಬಿಡುವಂಥದ್ದು. ಆ ಕ್ಷಣಕ್ಕೆ ಇವಳು ನನ್ನವಳು/ನನ್ನವ ಅನ್ನುವ ಆ ಒಂದು ಭಾವ ಮೂಡಿ ಮರೆಯಾಗೋದಂತೂ ಸುಳ್ಳಲ್ಲ. ಅದು ಬೇಕಂತಲೇ ಆಗಿರೋದಿಲ್ಲ. ಇಂಥ ಪ್ರತಿ ಮೊದಲ ಅನುಭವ ಪ್ರತೀ ಹೆಣ್ಣನ್ನೂ ಕಾಡಿರುತ್ತೆ. ಪ್ರತೀ ಗಂಡಿನ ನಿದ್ದೆಗೆಡಿಸಿರುತ್ತೆ. ತನ್ನ ಕನಸಿನ ಕೃಷ್ಣನನ್ನು ಈ ವಿಶೇಷ ಸನ್ನಿವೇಶಗಳಲ್ಲಿ ಹುಡುಕುವ ಪ್ರಯತ್ನ ನಡೆದಿರುತ್ತೆ. ಪ್ರತಿಯೊಬ್ಬ ಹುಡುಗಿಯೂ ಇಂಥ ಸನ್ನಿವೇಶಗಳನ್ನು ದಾಟಿಯೇ ಬಂದಿರ್ತಾಳೆ. ಆದರೆ, ಮನಸ್ಸಿನಲ್ಲಿ ಹೊಮ್ಮಿದ ಮಧುರ ಭಾವನೆಗಳನ್ನು ಹೊರಗೆ ಪ್ರಕಟವಾಗಲು ಬಿಡುವುದಿಲ್ಲ. 

Advertisement

ಆ ಕ್ಷಣ ಮೂಡಿದ “ಬೇಕು’ ಅನ್ನುವ ಆಸೆಗಳಿಗೆ ಸರಿಯಾದ ಪೋಷಣೆ ಸಿಕ್ಕೋದಿಲ್ಲ. ಅಲ್ಲಿಗೆ ಅದು ಆಕರ್ಷಣೆ ಅನ್ನೋ ಹೆಸರಲ್ಲಿ ಕೊನೆಗೊಳ್ಳುತ್ತೆ. ಆ ಭಾವನೆಗಳು ಉದ್ದ ಬೆಳೆಯೋಲ್ಲ. ಹರೆಯ 30 ಮುಟ್ಟುವ ಹೊತ್ತಿಗೆ ಆ ನೆನಪುಗಳು ಮನದೊಳಗೆ ಸುಳಿದಾಗ ತಿಳಿನಗೆಯೊಂದು ಮೂಡಿದ್ರೂ, ಅದೊಂದು,beautiful infatuation  ಅಂಥ ನೆನಪುಗಳನ್ನ ಲೈಟ್‌ ಆಗಿ ಕೊಡವಿಕೊಳ್ಳುವಷ್ಟರ ಮಟ್ಟಿಗೆ ಹುಡುಗೀರು ಮೈಂಡ್‌ಸೆಟ್‌ ಬೆಳೆಸಿಕೊಂಡಿರ್ತಾರೆ.

ರೆಸ್ಟೋರೆಂಟ್‌ ಒಂದರಲ್ಲಿ ಯಾವುದೋ ಒಂದು ಜೋಡಿ ಒಂದೇ ಕಪ್‌ನಲ್ಲಿ ಜ್ಯೂಸ್‌ ಹೀರುತ್ತ ಇದ್ದರೆ, ಮತ್ತೂಂದು ಟೇಬಲ್‌ನಲ್ಲಿ ಯಾರೋ ಕಾಲೇಜು ಕನ್ಯೆ ಸೋದರ ಮಾವನ ಜೊತೆ ನಾಚಾ¤ ನಾಚಾ¤ ಸಲ್ಲಾಪ ಆಡ್ತಾ ಇದ್ದರೆ, ದೂರದಲ್ಲೇ ಕೂತು ಅವರನ್ನು ನೋಡ್ತಾ ನಿಧಾನಕ್ಕೆ ಕಾಫಿ ಹೀರ್ತಾ ತಾನು ರೀಫ್ರೆಶ್‌ ಆಗೋಮಟ್ಟಿಗೆ, ರಸ್ತೆಯಲ್ಲಿ ಜೋಡಿಯೊಂದು ಹೆಗಲಮೇಲೆ ಕೈಹಾಕಿ ನಡೀತಾ ಇದ್ದರೆ, ಟೆರೇಸ್‌ ಮೇಲೆ ನಿಂತು ಪುರುಷ ಸಹೋದ್ಯೋಗಿ ಜತೆ ಕಮೆಂಟ್‌ ಹೊಡಿಯೋಷ್ಟರ ಮಟ್ಟಿಗೆ, ಕಾಲೇಜು ಹುಡುಗ-ಹುಡುಗಿಯರ ಗುಂಪೊಂದು ಗಲಾಟೆ ಮಾಡ್ತಾ ನೈಟ್‌ಔಟ್‌ ಮಾಡ್ತಾ ಇದ್ದರೆ, ಅವರ ಮಧ್ಯೆ ಇರುವ ಕ್ರಶ್‌ ನೋಡ್ತಾ, ಅದನ್ನು ಎಂಜಾಯ್‌ ಮಾಡ್ತಾ, ತನ್ನ ಕೆಲಸದ ತಲೆನೋವು ಕಡಿಮೆ ಮಾಡಿಕೊಳ್ತಾ, ತಾನು ಮಾತ್ರ ಐಪಾಡ್‌ನ‌ಲ್ಲಿ ನಾಳೆಯ ಶೆಡ್ನೂಲ್‌ನ ರಿಮೈಂಡರ್‌ಗೆ ಹಾಕಿಕೊಳ್ತಾ ಮನಸಾರೆ ನಕ್ಕುಬಿಡುವಷ್ಟು ಪ್ರಬುದ್ಧಳಾಗಿರ್ತಾಳೆ 30 ದಾಟಿದ ಹುಡುಗಿ!

ಬ್ಯಾಚುಲರ್‌ ಲೈಫ್, ಅವಕಾಶಗಳ ಆಗರ ಪ್ರೀತಿ, ಮದುವೆ, ಸಂಗಾತಿ… ಜೀವನ ಅಂದ್ರೆ ಇದಿಷ್ಟೇ ಅಲ್ಲ; ಸಾಧನೆಯ ಹಾದಿಯೊಂದು ನನಗೋಸ್ಕರ ಕಾದಿದೆ ಎಂದು ಯೋಚಿಸುವಷ್ಟರ ಮಟ್ಟಿಗೆ, 30ರ ಹುಡುಗಿ ಮೆಚೂÂರ್ಡ್‌ ಆಗಿರ್ತಾಳೆ. ಇದು ಕಣಿÅ ಚಿಛಿಚuಠಿy ಟf ಠಿಜಜಿrಠಿy. ಅವಳಿಗಿಂತ ಚಿಕ್ಕವರಿಗೆ ಮದುವೆ ಆಗಿದೆ. ಮಕ್ಕಳಾಗಿವೆ. ಕ್ಲಾಸ್‌ಮೇಟ್ಸ್‌ ಆಗಿದ್ದ ಗೆಳತಿಯರ ಮದುವೆಯೂ ಆಗಿ, ಅವರೆಲ್ಲ ಲೈಫ್ನಲ್ಲಿ ಸೆಟ್ಲ ಆಗಿದ್ದೂ ಆಯಿತು; ಇವೆಲ್ಲಾ ಅವಳನ್ನು ಡಿಸ್ಟರ್ಬ್ ಮಾಡಲ್ಲ. ಬೀಯಿಂಗ್‌ ಬೋಲ್ಡ್‌ , ಹೆಜ್ಜೆಗಳು ಸ್ಟ್ರಾಂಗ್‌ ಆಗಿರ್ತವೆ. ದೃಢ ಆಗಿರ್ತಾವೆ.

ಇಂಥ ಬೋಲ್ಡ್‌ ಕ್ಯಾರೆಕ್ಟರ್‌ಗೆ ಸಂಗಾತಿಯ ಬಗ್ಗೆ ನಿರ್ದಿಷ್ಟ ಕಲ್ಪನೆಗಳಿರುತ್ತವೆ. 30ರ ನಂತರ ಶುರುವಾದ ಸಂಬಂಧಗಳು ಬ್ರೇಕ್‌ಅಪ್ಸ್‌ ಇರಲ್ಲ, ಸಾಮಾನ್ಯ ಹೆಣ್ಣುಮಗಳಿಗಿಂತ ಹೆಚ್ಚಿನ ಜವಾಬ್ದಾರಿಯ ಅರಿವು ಇರುತ್ತೆ. ಸ್ನೇಹ ಸಂಬಂಧಗಳ ಆಯ್ಕೆಯ ವಿಚಾರ ಬಂದಾಗ ಚೂÂಸಿ ಆಗಿರ್ತಾರೆ. ಅನಗತ್ಯ ಸಂಬಂಧಗಳ ಜೊತೆ ಅಟ್ಯಾಚ್‌ಮೆಂಟ್‌ ಇರಲ್ಲ, ಸಮಸ್ಯೆಗಳನ್ನು ನಿಭಾಯಿಸಬಲ್ಲ ಮನಃಸ್ಥಿತಿಯನ್ನು ಬೆಳೆಸಿಕೊಂಡಿರ್ತಾರೆ. ಸವಾಲುಗಳು ಅವಳನ್ನು ಧೃತಿಗೆಡಿಸೋಲ್ಲ. Beauty fitness conscious  ಆಗಿರ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಜೀವನದ ಬಗ್ಗೆ ಅವಳಿಗೆ ಆಯ್ಕೆಯ ಸ್ವಾತಂತ್ರ್ಯ ಇರುತ್ತೆ.

ವಯಸ್ಸು ನೋ ಮ್ಯಾಟರ್‌
ಮದುವೆಯ ವಿಷಯವಾಗಿ ಮೊದಲಿಂದಲೂ ಒಂದು ನಂಬಿಕೆ ಇದೆ. ಏನೆಂದರೆ, ಹೆಣ್ಣುಮಕ್ಕಳಿಗೆ 25ರೊಳಗೆ ಮದುವೆ ಆಗ್ಬೇಕು. ತಡವಾದ್ರೆ ಮಕ್ಕಳಾಗಲ್ಲ, ಹುಡುಗನ ಫೈನಾನ್ಷಿಯಲ್‌ ಸ್ಟೇಟಸ್‌ ಮುಖ್ಯ. ಹುಡುಗ-ಹುಡುಗಿಯ ನಡುವೆ 5-7 ವರ್ಷಗಳ ಗ್ಯಾಪ್‌ ಇರಬೇಕು… ಇತ್ಯಾದಿ. ಈ ಕಾಲದ ಹೆಣ್ಣು , ಅದರಲ್ಲೂ 30 ವರ್ಷದವರೆಗೂ ಒಂಟಿಯಾಗಿದ್ದು ಟೋಟಲಿ ಮೆಚೂÂರ್ಡ್‌ ಅನ್ನಿಸಿಕೊಂಡಿರುವ ಹುಡುಗಿಯರು ಈ ಥರದ ಸಿದ್ಧಸೂತ್ರಗಳಿಗೆ ಬದ್ಧರಾಗಿರೋದಿಲ್ಲ. ಮದುವೆ ಆಗದೇ ಹೀಗೆ ಉಳಿದುಬಿಟ್ರೆ, ಅನ್ನೋ ಆತಂಕವನ್ನು ಗಾಳಿಗೆ ತೂರಿಬಿಟ್ಟಿದ್ದಾಳೆ. ಅವಳಿಗೆ ಬೇಕಾಗಿರೋದು ಪ್ರೀತಿ, ಸಹಪಯಣಿಗ, ಒಂದೇ ಅಭಿರುಚಿ, ಮನಃಸ್ಥಿತಿಯ ಗೆಳೆಯ. ವಯಸ್ಸು ನೋ ಮ್ಯಾಟರ್‌, ಒಂದಷ್ಟು ವರ್ಷ ಸಣ್ಣವನಾದ್ರೂ ಸರಿ, ತನಗಿಂತ ಹಿರಿಯ, ಬಾಸ್‌ನಂಥ ವ್ಯಕ್ತಿತ್ವವಾದ್ರೂ ಸರಿ. ತನ್ನ ಕನಸುಗಳಿಗೆ ಸಂಗಾತಿಯಾಗುತ್ತ ಬದುಕಿಗೆ ಕಂಫ‌ರ್ಟ್‌ ನೀಡುವ ವ್ಯಕ್ತಿ ಅವಳ ಮೊದಲ ಆಯ್ಕೆ ಆಗಿರುತ್ತಾನೆ.

ಸಂಬಂಧದಲ್ಲೂ  ಪ್ರೈವೆೆಸಿ ನೀಡುವವನು. ಹಕ್ಕಿ ಥರ ಹಾರಲು ಬಿಡುವವನು, ಕನಸುಗಳಿಗೆ ಜತೆಯಾಗುವವನು, ಹೊಸತನ್ನು ಕಲಿಸುವವನು, ಕಲಿಯಲು ಹುರುಪು ತುಂಬುವವನು, ಇಂಥಾ ಕೆಲವೊಂದು ನಿರೀಕ್ಷೆಗಳೇ ಅವ‌ಳ ಆದ್ಯತೆಗಳಾಗಿವೆ. ಅವಳಿಗೆ ಬೇಕಾದ ಗುಣಗಳು ಅಪ್ಪ-ಅಮ್ಮ ನೋಡಿದ ಹುಡುಗನಲ್ಲಿ,  ಪ್ರಪೋಸ್‌ ಮಾಡಿದ ಹುಡುಗನಲ್ಲಿ ಇಲ್ಲದೆ ಹೋದ್ರೆ ರಾಜಿಯಾಗೋಕೆ ಇವರು ರೆಡಿಯಿರಲ್ಲ, ಇನ್ನೂ ಸ್ವಲ್ಪ ದಿನ ಕಾದು ನೋಡೋಣ. ನನ್ನ ಅಭಿರುಚಿಗೆ ಹೊಂದುವಂಥ ಹುಡುಗ ಖಂಡಿತ ಸಿಕ್ತಾನೆ. ಹೊಂದಾಣಿಕೆ ಆಗ್ತಿಲ್ಲ ಅಂತ ಮೊದಲೇ ಗೊತ್ತಿದ್ದೂ ಮದುವೆಯಾಗಿ ಆಮೇಲೆ ಒದ್ದಾಡೋದು ಬೇಡ ಎಂದು ಈ ಹುಡುಗೀರು ಲೆಕ್ಕ ಹಾಕಿರ್ತಾರೆ.

ಲಕ್ಷ್ಮಣ ರೇಖೆ
ಹಾಗಂತ, ಬೋಲ್ಡ್‌ ಆಗಿರೋ ಹೆಣ್ಣುಮಕ್ಕಳು  ಪುರುಷರ ಗುಂಪಲ್ಲಿ ಇದ್ದಾಕ್ಷಣ ಚಾರಿತ್ರ್ಯಹೀನರಾಗಿರೋದಿಲ್ಲ. ಆದ್ರೂ ಇಂಥದೊಂದು ಕಳಂಕ ನವಯುಗದ ಹುಡುಗಿಗೆ ಮೆತ್ಕೊಂಡಿದೆ. ಹೆಣ್ಣಿನ ಗುಂಪಿನಲ್ಲಿ ಸಿಗದೆ ಇರುವ ಬೆಂಬಲ, ಪೋತ್ಸಾಹ, ಕಲಿಕೆ, ಪುರುಷರ ಗುಂಪಲ್ಲಿ ಸಿಕ್ಕಿಬೋìದು. ಆದ್ರೆ ಬೋಲ್ಡ್‌ ಹುಡುಗಿಯರು ಸ್ಲಿàವ್‌, ಜೀನ್ಸ್‌ ಹಾಕಿದಾಕ್ಷಣ ತಮ್ಮ ಪರಿಮಿತಿಯನ್ನು ದಾಟಾ¤ರೆ ಅಂತ ಅರ್ಥ ಅಲ್ಲ, ಒಂದು ಹುಡುಗಿ, 30 ವರ್ಷಗಳ ಕಾಲ ಸಿಂಗಲ್‌ ಆಗಿ ಬದುಕೋದು ಅಂದುಕೊಂಡಷ್ಟು ಸುಲಭವೂ ಅಲ್ಲ, ವರ್ಷಗಳುದ್ದಕ್ಕೂ ಜೊತೆಯಾದ ನೋವು, ನಲಿವು, ಕಿರಿಕಿರಿ, ಅವಮಾನಗಳನ್ನೆಲ್ಲ ಮೆಟ್ಟಿ ನಿಂತು ಆಕೆ ಶಿಸ್ತು, ಸನ್ನಡತೆ, ಗೌರವಯುವ ಪರಿಸರದಲ್ಲೇ ತನ್ನನ್ನು ಛಲಗಾತಿಯಾಗಿ ರೂಪಿಸಿಕೊಂಡಿರ್ತಾಳೆ. ಸಾಮಾನ್ಯ ಹೆಣ್ಣಿಗಿರುವುದಕ್ಕಿಂತ ಹೆಚ್ಚಿನ ಸಂಯಮ, ವಿವೇಕ, ಪ್ರಜ್ಞೆ , ಸೂಕ್ಷ್ಮತೆಯನ್ನೂ ಬೆಳೆಸಿಕೊಂಡಿರ್ತಾಳೆ.

– ಶುಭಾಶಯ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next