Advertisement

Kalaburagi: ಉದಯವಾಣಿ ಸಹಯೋಗದಲ್ಲಿ ಯೋಗೋತ್ಸವ

08:45 AM Jun 21, 2024 | Team Udayavani |

ಕಲಬುರಗಿ: ಇಲ್ಲಿನ ಸಮಾಧಾನ ಯೋಗ ಸಾಧನೆ ಮತ್ತು ರೋಗ ಚಿಕಿತ್ಸಾ ಕೇಂದ್ರದಲ್ಲಿ ಜೂ.21ರ ಶುಕ್ರವಾರ ಬೆಳಗ್ಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉದಯವಾಣಿ ಬಳಗ ಹಾಗೂ ಚತುರಾ ಪೌಂಡೇಷನ್, ಚಾರಿಟೇಬಲ್ ಸಂಯುಕ್ತವಾಗಿ ಯೋಗೋತ್ಸವ ಆಯೋಜನೆ ಮಾಡಲಾಗಿತ್ತು.

Advertisement

ಶ್ರೀ ಶರಣಬಸವೇಶ್ವರ ಸಂಸ್ಥಾನದ ಫೂಜ್ಯ ಲಿಂಗರಾಜಪ್ಪ ಅಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗದಿಂದ ಶರೀರ ಮತ್ತು ಮನಸ್ಸಿನ ವಿಕಾಸವಾಗುತ್ತದೆ ಎಂದರು.

ಯೋಗ ಶಿಕ್ಷಕ ಸಂಗಮೇಶ ಹತ್ತಿ ಯೋಗ ಹೇಳಿಕೊಟ್ಟರು. ಈ ವೇಳೆ ಶಿವನಗೌಡ ಪಾಟೀಲ, ನಾಗಶೆಟ್ಟಿ ಡಾಕುಳಗಿ, ನೀತೀನ್, ಇನ್ನೂ ಹಲವರು ಇದ್ದರು.

ಉದಯವಾಣಿಯ ಹಿರಿಯ ವರದಿಗಾರ ಹಣಮಂತರಾವ್ ಭೈರಾಮಡಗಿ ಸ್ವಾಗತಿಸಿದರು. ನಗರದ ಶ್ರೀಗುರು ಶಾಲೆ, ಅಭಿಷೆರಕ ಪಾಟೀಲ ಶಾಲೆ, ಕೆಎಸ್.ಎಸ್.ಎಸ್ ಶಾಲೆಯ ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next