Advertisement

ಶೀಘ್ರದಲ್ಲೇ ಮಧ್ಯ ರೈಲ್ವೇ ಭದ್ರತಾ ಪಡೆಗೆ ಬಾಡಿ ಕೆಮರಾ

12:48 AM Dec 29, 2022 | Team Udayavani |

ಮುಂಬಯಿ: ರೈಲ್ವೇ ಕೋಚ್‌, ನಿಲ್ದಾಣದ ಆವರಣ, ಪ್ಲಾಟ್‌ಫಾರ್ಮ್ಗಳಲ್ಲಿನ ಪ್ರಯಾಣಿಕರ ಎಲ್ಲ ಚಟುವಟಿಕೆಗಳನ್ನು ಗಮನಿಸಲು ಮಧ್ಯ ರೈಲ್ವೇಯ ಭದ್ರತಾ ಪಡೆಗಳ ಸಮವಸ್ತ್ರದಲ್ಲಿ ಬಾಡಿ ಕೆಮರಾ ಗಳನ್ನು ಅಳವಡಿಸಲು ನಿರ್ಧರಿಸಿದೆ.

Advertisement

ಮಧ್ಯ ರೈಲ್ವೇ ಭದ್ರತಾ ಪಡೆ 40 ಬಾಡಿ ಕೆಮರಾಗಳನ್ನು ಖರೀದಿಸಲಿದ್ದು, ಈ ಕೆಮರಾಗಳು ಒಂದು ತಿಂಗಳಲ್ಲಿ ಭದ್ರತಾ ಸಿಬಂದಿಗೆ ಲಭ್ಯವಾಗಲಿದೆ. ಪ್ರಸ್ತುತ ಪಶ್ಚಿಮ ರೈಲ್ವೇಯ ಮುಂಬಯಿ ವಿಭಾಗದ ಭದ್ರತಾ ಪಡೆ ಕೂಡ 40 ಬಾಡಿ ಕೆಮರಾಗಳನ್ನು ಹೊಂದಿದೆ.

ಪ್ರಯಾಣದ ವೇಳೆ ಪ್ರಯಾಣಿಕರ ಲಗೇಜ್‌ ಕಳವು, ವಾಗ್ವಾದಗಳು, ದೌರ್ಜನ್ಯದ ಘಟನೆಗಳು ನಡೆಯುತ್ತವೆ. ಅಲ್ಲದೆ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅನ್ಯರು ಬಿಟ್ಟುಹೋದ ವಸ್ತುಗಳನ್ನು ತೆಗೆದುಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿವೆ. ಈ ಪ್ರಕರಣಗಳ ಮೇಲೆ ಕಣ್ಣಿಡಲು ಬಾಡಿ ಕೆಮರಾಗಳು ಉಪ ಯುಕ್ತವಾಗಿರಲಿದೆ ಎಂದು ಮಧ್ಯ ರೈಲ್ವೇಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ರಿಷಿ ಶುಕ್ಲಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next