Advertisement
ವಡಭಾಂಡೇಶ್ವರ ಸಮೀಪದ ಗೋಪಾಲ ಸುವರ್ಣ ಅವರಿಗೆ ಸೇರಿದ ಮಾಲ್ತಿದೇವಿ 11 ಹೆಸರಿನ ತ್ರಿಸೆವೆಂಟಿ ಬೋಟ್ ಮೇ 16ರಂದು ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೇ 17ರ ಮುಂಜಾನೆ 5ರ ವೇಳೆಗೆ ಭಟ್ಕಳದಿಂದ 12 ಮಾರು ದೂರ ಮೀನುಗಾರಿಕೆ ನಡೆಸುವಾಗ ಶ್ರೀ ದುರ್ಗಾ ಬೋಟ್ ಮಂಜು ಮುಸುಕಿದ್ದ ವಾತಾವರಣದಿಂದಾಗಿ ಈ ಬೋಟ್‌ಗೆ ಢಿಕ್ಕಿ ಹೊಡೆಯಿತು. ಮಾಲ್ತಿದೇವಿ ಬೋಟ್‌ನ ಹಲಗೆ ಒಡೆದು ನೀರು ಒಳ ಬರಲಾರಂಭಿಸಿ ಸಂಪೂರ್ಣ ಮುಳುಗಿತು.
ಮಾಲ್ತಿದೇವಿ ದೋಣಿಯ ಎರಡೂ ಬದಿಗೆ ಹಗ್ಗವನ್ನು ಕಟ್ಟಿ ಗಂಗೊಳ್ಳಿ ಬಂದರಿಗೆ ಎಳೆದು ತರುವಾಗ ಗಂಗೊಳ್ಳಿ ಬಂದರು ಅಳಿವೆಯಿಂದ 8 ಮಾರು ದೂರದಲ್ಲಿರುವಾಗ ಬೋಟಿನಲ್ಲಿ ನೀರು ತುಂಬಿ ಕಟ್ಟಿದ ಹಗ್ಗ ತುಂಡಾದ ಕಾರಣ ಬೋಟು ಶೇ. 90ರಷ್ಟು ಮುಳುಗಡೆಗೊಂಡಿತು. ಬೋಟಿನಲ್ಲಿದ್ದ ಸುಮಾರು 2,500 ಲೀ. ಡೀಸೆಲ್, ಟ್ರಾಲ್‌ಬಲೆ, ಎಂಜಿನ್, ಇನ್ನಿತರ ಉಪಕರಣಗಳು ಸೇರಿದಂತೆ 20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.