ಮುಂಬೈ : ಬಿಎಂಡಬ್ಲ್ಯೂ ಕಂಪನಿ, ತನ್ನ ಹೊಸ ಸ್ಪೋರ್ಟ್ಸ್ ಸೆಡಾನ್ ಕಾರಿನ ಸುಧಾರಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬಿಎಂಡಬ್ಲ್ಯೂ 5 ಸರಣಿಯ ಫೇಸ್‌ಲಿಫ್ಟ್ ಕಾರ್ಯಕ್ಷಮತೆ, ಐಶಾರಾಮಿ ಹಾಗೂ ಕಂಫರ್ಟ್ ಗಳ ಸಮ್ಮಿಲನವೆಂದು ಕಂಪನಿ ಹೇಳಿಕೊಂಡಿದೆ.
ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅಳವಡಿಸಲಾಗಿದೆ. ಒಳಾಂಗಣ ಉತ್ಕೃಷ್ಟವಾಗಿದ್ದು ಹೆಚ್ಚು ಜಾಗ ಹೊಂದಿದೆ.
4 ಹಂತದ ಕ್ಲೈಮೇಟ್ ಕಂಟ್ರೋಲ್ ಎ.ಸಿ. ಹಾಗೂ 360 ಡಿಗ್ರಿ ವ್ಯೂ ಕ್ಯಾಮೆರಾ ಇದೆ.
Related Articles
ಪೆಟ್ರೋಲ್, ಡೀಸೆಲ್ ಎರಡೂ ಮಾದರಿಗಳಲ್ಲಿ ಇದು ಲಭ್ಯವಿದ್ದು, 530ಐ ಮಾದರಿಯ ಪೆಟ್ರೋಲ್ ಇಂಜಿನ್ ಇರುವ ಕಾರಿನ ಎಕ್ಸ್ ಷೋರೂಂ ಬೆಲೆ 62.9 ಲಕ್ಷ ರೂ. ಇದ್ದರೆ, ಡೀಸೆಲ್ ಇಂಜಿನ್‌ನ ಬೆಲೆ 71.9 ಲಕ್ಷ ರೂ. ಇದೆ.
ಇದನ್ನೂ ಓದಿ :ಬ್ಯಾಂಕ್ ಷೇರುಗಳಿಗೆ ನಷ್ಟ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತ