Advertisement

ಹೊಸ ವರ್ಷಕ್ಕೆ ಬಿಎಂಟಿಸಿ, ಮೆಟ್ರೋ ಹೆಚ್ಚುವರಿ ಸೇವೆ

12:30 PM Dec 31, 2017 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ಅಂಗವಾಗಿ ಭಾನುವಾರ ರಾತ್ರಿ ನಗರದಲ್ಲಿ ಬಿಎಂಟಿಸಿ ಬಸ್‌ ಮತ್ತು “ನಮ್ಮ ಮೆಟ್ರೋ’ ರೈಲುಗಳು ಹೆಚ್ಚುವರಿ ಸೇವೆ ಕಲ್ಪಿಸಲಿವೆ. ಅಂದು ರಾತ್ರಿ 10.30ರಿಂದ ತಡರಾತ್ರಿ 2ರವರೆಗೂ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಿಂದ ನಗರದ ವಿವಿಧೆಡೆ ಬಸ್‌ ಸೇವೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. 

Advertisement

ಅದೇ ರೀತಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾನುವಾರ “ನಮ್ಮ ಮೆಟ್ರೋ’ ಸೇವೆ ತಡರಾತ್ರಿ 2ಗಂಟೆ ರವರೆಗೆ ಇರುತ್ತದೆ. ಆದರೆ, ಈ ಹೆಚ್ಚುವರಿ ಸೇವೆ ಅವಧಿಯಲ್ಲಿ ಮೆಟ್ರೋದಲ್ಲಿ ಸಂಚರಿಸಲು ಹೆಚ್ಚುವರಿ ಹಣವನ್ನೂ ಭರಿಸಬೇಕು! 

ಟ್ರಿನಿಟಿ, ಎಂ.ಜಿ. ರಸ್ತೆ ಮತ್ತು ಕಬ್ಬನ್‌ ಉದ್ಯಾನದ ನಿಲ್ದಾಣದಿಂದ ಪ್ರಯಾಣಿಕರು ಎಲ್ಲಿಗೇ ಸಂಚರಿಸಿದರೂ ಪ್ರಯಾಣ ದರ 50 ರೂ. ನಿಗದಿಪಡಿಸಲಾಗಿದೆ. ಈ ಪ್ರಯಾಣ ದರವು 31ರ ರಾತ್ರಿ 11ರ ನಂತರ ಈ ಉದ್ದೇಶಿತ ಮೂರು ನಿಲ್ದಾಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಮೆಟ್ರೋ ನಿಗಮ ಹೇಳಿದೆ.

ಮಾರ್ಗ ಸಂಖ್ಯೆ    ಎಲ್ಲಿಂದ    ಎಲ್ಲಿಗೆ
-ಜಿ-1    ಎಂ.ಜಿ. ರಸ್ತೆ ನಿಲ್ದಾಣ    ಕಾಡುಗೋಡಿ ನಿಲ್ದಾಣ
-ಜಿ-1    ಎಂ.ಜಿ. ರಸ್ತೆ ನಿಲ್ದಾಣ    ಕಾಡುಗೋಡಿ ನಿಲ್ದಾಣ
-ಜಿ-2    ಎಂ.ಜಿ. ರಸ್ತೆ ನಿಲ್ದಾಣ    ಸರ್ಜಾಪುರ
-ಜಿ-3    ಬ್ರಿಗೇಡ್‌ ರಸ್ತೆ    ಎಲೆಕ್ಟ್ರಾನಿಕ್‌ ಸಿಟಿ    
-ಜಿ-3    ಬ್ರಿಗೇಡ್‌ ರಸ್ತೆ    ಎಲೆಕ್ಟ್ರಾನಿಕ್‌ ಸಿಟಿ
-ಜಿ-4    ಬ್ರಿಗೇಡರ್‌ ರಸ್ತೆ    ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
-ಜಿ-6    ಎಂ.ಜಿ. ರಸ್ತೆ ನಿಲ್ದಾಣ    ಕೆಂಗೇರಿ ಹೌಸಿಂಗ್‌ ಬೋರ್ಡ್‌ ಕ್ವಾಟ್ರìಸ್‌
-ಜಿ-7    ಎಂ.ಜಿ. ರಸ್ತೆ ನಿಲ್ದಾಣ    ಜನಪ್ರಿಯ ಟೌನ್‌ಶಿಪ್‌
-ಜಿ-8    ಎಂ.ಜಿ. ರಸ್ತೆ ನಿಲ್ದಾಣ    ನೆಲಮಂಗಲ
-ಜಿ-9    ಎಂ.ಜಿ. ರಸ್ತೆ ನಿಲ್ದಾಣ    ಯಲಹಂಕ ಉಪನಗರ
-ಜಿ-10    ಎಂ.ಜಿ. ರಸ್ತೆ ನಿಲ್ದಾಣ    ಆರ್‌.ಕೆ. ಹೆಗಡೆನಗರ
-ಜಿ-11    ಎಂ.ಜಿ. ರಸ್ತೆ ನಿಲ್ದಾಣ    ಬಾಗಲೂರು
-ಜಿ-12    ಎಂ.ಜಿ. ರಸ್ತೆ ನಿಲ್ದಾಣ    ಹೊಸಕೋಟೆ

Advertisement

Udayavani is now on Telegram. Click here to join our channel and stay updated with the latest news.

Next