Advertisement

ಬ್ಲೂವೇಲ್‌: ಹೈಕೋರ್ಟ್‌, ಎನ್‌ಸಿಪಿಸಿಆರ್‌ ಕಳವಳ

07:45 AM Aug 18, 2017 | Harsha Rao |

ಹೊಸದಿಲ್ಲಿ:  ಜೀವವನ್ನೇ ಕೇಳುವ ಆನ್‌ಲೈನ್‌ ಆಟ “ಬ್ಲೂವೇಲ್‌ ಚಾಲೆಂಜ್‌’ಗೆ ಸರಕಾರ ತಡೆ ಒಡ್ಡಿದ ಬಳಿಕವೂ ಈ ಆಟಕ್ಕೆ ಮಕ್ಕಳು ಬಲಿಯಾಗಿರುವ ಸುದ್ದಿ ಬರುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಹೆತ್ತವರು ಮತ್ತು ಶಿಕ್ಷಕರು ಮಕ್ಕಳ ವರ್ತನೆ ಮೇಲೆ ಸದಾ ಗಮನ ವಹಿ ಸಲು ಹೇಳಿದೆ. ಅಸಹಜ ಮತ್ತು ವಿಕ್ಷಿಪ್ತ ವರ್ತನೆ ಕಂಡು ಬಂದರೆ ಮಕ್ಕಳನ್ನು ಜಾಗೃತವಾಗಿ ನೋಡಿಕೊಳ್ಳಲು ಹೇಳಿದೆ. 

Advertisement

ದಿಲ್ಲಿ ಹೈಕೋರ್ಟ್‌ ಕೂಡ ಇಂಥದ್ದೇ ಆತಂಕವನ್ನು ವ್ಯಕ್ತಪಡಿಸಿದೆ. ಮಕ್ಕಳು ಈ ಆಟಕ್ಕೆ ಬಲಿಯಾಗುತ್ತಿರುವುದರಲ್ಲಿ ಆಶ್ವರ್ಯವಿಲ್ಲ. ಆದರೆ ತಮ್ಮನ್ನು ತಾವೇ ನೋಯಿಸಿಕೊಂಡು, ಜೀವವನ್ನೇ ಪಣಕ್ಕಿಟ್ಟು ಆಡುವ ಈ ಆಟಕ್ಕೆ ವಯಸ್ಕರೂ ಏಕೆ ಮರುಳಾಗುತ್ತಿದ್ದಾರೆ ಎಂದು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿದೆೆ. ಅಲ್ಲದೇ, ಈ ಆಟವನ್ನು ಡೌನ್‌ಲೋಡ್‌ ಮಾಡುವುದನ್ನು ತಡೆಯಲು ಸರಕಾರ ಯಾವೆಲ್ಲ ಕ್ರಮ ಕೈಗೊಂಡಿದೆ ಎಂದು ಕೇಳಿದೆ. ಇಂಥ ಘಟನೆಗಳು ದಿಲ್ಲಿಯಲ್ಲಿ ನಡೆದಿವೆಯೇ, ಸರಕಾರ ಇದರ ತಡೆಗೆ ಏನು ಕ್ರಮ ಕೈಗೊಂಡಿದೆ ಎಂದು ತಿಳಿಸಲು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next