Advertisement

Hotels: ಹೋಟೆಲ್‌ಗ‌ಳಿಗೆ ಗ್ರೀನ್‌ ಸ್ಟಾರ್‌ ಚಾಲೆಂಜ್‌

09:26 AM Mar 23, 2024 | Team Udayavani |

ಬೆಂಗಳೂರು: ವಿಶ್ವ ಜಲ ದಿನವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗಾಗಿ ಹಮ್ಮಿಕೊಂಡಿರುವ “ಗ್ರೀನ್‌ ಸ್ಟಾರ್‌ ಚಾಲೆಂಜ್‌’ ಸ್ಪರ್ಧೆಗೆ ಶುಕ್ರವಾರ ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್‌ ಮನೋಹರ್‌ ಚಾಲನೆ ನೀಡಿದರು.

Advertisement

ಶಾಂಗ್ರಿಲಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಪ್ರಸಾತ್‌ ಮನೋಹರ್‌ ಅವರು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರನ್ನು ಉಳಿತಾಯ ಮಾಡುವಂತಹ ಏರಿಯೇಟರ್‌ ಅಳವಡಿಸುವ ಮೂಲಕ ಗ್ರೀನ್‌ಸ್ಟಾರ್‌ ಚಾಲೆಂಜ್‌ಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 30 ದಿನಗಳಲ್ಲಿ ಪಂಚ ಸೂತ್ರ ಅಳವಡಿಸಿಕೊಳ್ಳುವಂತಹ ರೆಸ್ಟೋ ರೆಂಟ್‌ಗಳು ಮತ್ತು ಹೋಟೆಲ್‌ಗ‌ಳಿಗೆ ಬೆಂಗಳೂರು ಜಲ ಮಂಡಳಿಯ ವತಿಯಿಂದ ಗ್ರೀನ್‌ಸ್ಟಾರ್‌ ರೇಟಿಂಗ್‌ ನೀಡಲಾಗುವುದು ಎಂದು ಹೇಳಿದರು.

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದೇ ಪಂಚ ಸೂತ್ರಗಳಾಗಿವೆ ಎಂದು ಹೇಳಿದರು.

ನೀರು ಅನಗತ್ಯ ಪೋಲು ಮಾಡಿದ್ರೆ ದೂರು ನೀಡಿ :

Advertisement

ಸರ್ಕಾರಿ ಕಚೇರಿ, ಮನೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಬೋರ್‌ವೆಲ್‌ಕೊರೆಯುತ್ತಿರುವುದು ಅಥವಾ ನೀರಿನ ದುರ್ಬಳಕೆ ಮಾಡುತ್ತಿ ರುವುದು ಕಂಡುಬಂದಲ್ಲಿ ಮಂಡಳಿಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೆಲವು ಜಲ ಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್‌ ಮನೋಹರ್‌ ಭರವಸೆ ನೀಡಿದರು.

ನೀರಿನ ಸಮಸ್ಯೆ ದೂರು ಇಳಿಕೆ:

ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಇದ್ದಂತಹ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಪ್ರತಿ ನಿತ್ಯ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 100ಕ್ಕೆ ಇಳಿದಿದೆ.

30 ದಿನ ಮಾನಿಟರಿಂಗ್‌: ಮುಂದಿನ 30 ದಿನಗಳ ಕಾಲ ನಾವು ಹೋಟೆಲ್‌ಗ‌ಳ ನೀರಿನ ಬಳಕೆಯನ್ನು ಮಾನಿಟರಿಂಗ್‌ ಮಾಡುತ್ತೇವೆ. ಗ್ರೀನ್‌ ಸ್ಟಾರ್‌ ರೇಟಿಂಗ್‌ ಅನ್ನು ಪಡೆಯಲು ಬಯಸುವಂತಹ ಹೋಟೆಲ್‌ಗ‌ಳು ಈ ಎಲ್ಲಾ ಕ್ರಮಗಳ ಅಳವಡಿಕೆಯ ನಂತರ ಜಲ ಮಂಡಳಿಗೆ ತಿಳಿಸುವುದು ಅವಶ್ಯಕ. ಆನಂತರ ಜಲ ಮಂಡಳಿಯ ಸಿಬ್ಬಂದಿಗಳು ಪರಿಶೀಲನೆಯನ್ನು ಮಾಡಿ ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡಿರುವ ಹೋಟೆಲ್‌ಗ‌ಳು ಮತ್ತು ರೆಸ್ಟೋರೆಂಟ್‌ಗಳಿಗೆ ಗ್ರೀನ್‌ ಸ್ಟಾರ್‌ ರೇಟಿಂಗ್‌ ನೀಡಲಿದ್ದಾರೆ ಎಂದು ತಿಳಿಸಿದರು.

ಅಪಾರ್ಟ್‌ಮೆಂಟ್‌ ಗ್ರೀನ್‌ ಸ್ಟಾರ್‌ ರೇಟಿಂಗ್‌ ಚಾಲನೆ: ಇದೇ ರೀತಿ ಅಪಾರ್ಟ್‌ಮೆಂಟ್‌ಗಳ ಗ್ರೀನ್‌ ಸ್ಟಾರ್‌ ರೇಟಿಂಗ್‌ಗೆ ಶನಿವಾರ ಚಾಲನೆ ನೀಡ ಲಾಗುವುದು. ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ ಆಯೋಜಿಸಲಾಗಿರುವ ಕಾರ್ಯಕ್ರಮ ದಲ್ಲಿ ಗ್ರೀನ್‌ ಸ್ಟಾರ್‌ ಚಾಲೆಂಜ್‌ ಅನ್ನು ಪ್ರಾರಂಭಿಸಲಾಗುವುದು. ಇದೇ ಪಂಚಸೂತ್ರಗಳ ಆಧಾರದ ಮೇಲೆ ಅಪಾರ್ಟ್‌ಮೆಂಟ್‌ಗಳಿಗೂ ಗ್ರೀನ್‌ ಸ್ಟಾರ್‌ ರೇಟಿಂಗ್‌ ಅನ್ನು ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next