ಹುಣಸೂರು: ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಲಾಗುತ್ತಿದ್ದು, ನಗರೋತ್ಥಾನ ಮತ್ತು ಎಸ್‌ಎಸ್‌ಪಿ ಯೋಜನೆಯಡಿ ಸಾಕಷ್ಟು ಅನುದಾನ ದೊರೆಯಲಿದ್ದು, ನಗರ ಸರ್ವಾಂಗೀಣವಾಗಿ ಪ್ರಗತಿ ಹೊಂದಲಿದೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಸ್ಲಂ ಬಡಾವಣೆಗಳ ಅಭಿವೃದ್ಧಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 75 ಲಕ್ಷ ರೂ.ವೆಚ್ಚದ ಹಾಗೂ ನ್ಯೂ ಮಾರುತಿ ಬಡಾವಣೆಯಲ್ಲಿ 9.5 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ರಂಗನಾಥ ಬಡಾವಣೆ, ರಹಮತ್ ಮೊಹಲ್ಲಾ, ಶಬ್ಬೀರ್ ನಗರದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ. ನಗರ ವ್ಯಾಪ್ತಿ ದಿನೇ ದಿನೆ ಹೆಚ್ಚುತ್ತಿದ್ದು, ಆದ್ಯತೆ ಮೇರೆಗೆ ಒಳಚರಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
2.5 ಕೋಟಿ ಅನುದಾನ: ನಗರಸಭಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, 14ನೇ ಹಣಕಾಸು ಯೋಜನೆ ಮತ್ತು ಎಸ್‌ಎಸ್‌ಪಿ ಯೋಜನೆಯಡಿ 2.5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ವಾರ್ಡ್ ಸದಸ್ಯರ ಮನವಿಯಂತೆ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನಸ್ರುಲ್ಲಾ, ಶರವಣ, ಹಜರತ್‌ಜಾನ್, ಶಿವರಾಜ್, ಸತೀಶ್‌ಕುಮಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಜಿಪಂ ಸದಸ್ಯ ಎಂ.ಬಿ.ಸುರೇಂದ್ರ, ಮಾಜಿ ಸದಸ್ಯ ಫಜಲುಲ್ಲಾ, ಅಣ್ಣಯ್ಯ ನಾಯಕ, ಪೌರಾಯುಕ್ತ ಶಿವಪ್ಪನಾಯಕ, ಎಂಜಿನಿಯರ್‌ಗಳಾದ ಸದಾಶಿವ³, ನಿರ್ಮಿತಿ ಕೇಂದ್ರದ ರಕ್ಷಿತ್, ಸಿಡಿಪಿಒ ನವೀನ್‌ಕುಮಾರ್, ಟಿಪಿಎಂಎಸ್ ಉಪಾಧ್ಯಕ್ಷ ಬಾಬು ಇತರರು ಉಪಸ್ಥಿತರಿದ್ದರು.