Advertisement

ಚೀನದಿಂದ ಆಫ್ರಿಕನ್‌ ಯೂನಿಯನ್‌ ದತ್ತಾಂಶ ಕಳವು, ಬೇಹುಗಾರಿಕೆ?

03:28 PM Jan 30, 2018 | Team Udayavani |

ಪ್ಯಾರಿಸ್‌ : ವಿಶ್ವಾದ್ಯಂತ ವಿಶ್ವಾಸಾರ್ಹತೆಯನ್ನು ರೂಪಿಸುವಲ್ಲಿನ ಚೀನದ ಸಮಸ್ಯೆಗೆ ಕೊನೆಯೇ ಇಲ್ಲವೆಂಬುದು ಇದೀಗ ಮತ್ತೂಮ್ಮೆ ಸ್ಪಷ್ಟವಾಗಿದೆ. 

Advertisement

ಆಫ್ರಿಕನ್‌ ಯೂನಿಯನ್‌ ನ (ಆಫ್ರಿಕ ದೇಶಗಳ ಒಕ್ಕೂಟ – AU) ಕಂಪ್ಯೂಟರ್‌ಗಳ ದತ್ತಾಂಶಗಳನ್ನು ಶಾಂಘೈನಲ್ಲಿನ ತನ್ನ ಸರ್ವರ್‌ಗೆ ಪ್ರತೀ ನಿತ್ಯ ರಾತ್ರಿ ಚೀನ ನಕಲು ಮಾಡುತ್ತಿದೆ ಎಂಬ ಆರೋಪವನ್ನು ಬೀಜಿಂಗ್‌ ಸಾರಾಸಗಟು ಅಲ್ಲಗಳೆದಿದೆ. 

ಅಡಿಸ್‌ ಅಬಾಬಾದಲ್ಲಿನ ಆಫ್ರಿಕನ್‌ ಯೂನಿಯನ್‌ನ ಪ್ರಧಾನ ಕಾರ್ಯಾಲಯದಲ್ಲಿರುವ ಕಂಪ್ಯೂಟರ್‌ಗಳ ದತ್ತಾಂಶವನ್ನು ಚೀನದ ಶಾಂಘೈನಲ್ಲಿನ ಸರ್ವರ್‌ನಲ್ಲಿ ನಕಲು ಮಾಡಲಾಗುತ್ತಿದೆ ಎಂಬ ವರದಿಯನ್ನು  ಫ್ರೆಂಚ್‌ ಪತ್ರಿಕೆ ಲೀ ಮಾಂಡ್‌ ಪ್ರಕಟಿಸಿರುವುದನ್ನು ಬೀಜಿಂಗ್‌ ಸಂಪೂರ್ಣ ಸುಳ್ಳೆಂದು ಹೇಳಿದೆ.

ಆಫ್ರಿಕದ ಬಹು ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯಾಲಯದಲ್ಲಿನ ಕಂಪ್ಯೂಟರ್‌ಗಳ ದತ್ತಾಂಶ ಕಳವು ಮತ್ತು ಬೇಹುಗಾರಿಕೆ ನಡೆಯುತ್ತಿರುವುದನ್ನು ಈ ವರ್ಷ ಜನವರಿಯಲ್ಲೇ ಪತ್ತೆ ಹಚ್ಚಲಾಗಿತ್ತು. ಆಫ್ರಿಕನ್‌ ಯೂನಿಯನ್‌ ಕಂಪ್ಯೂಟರ್‌ ಜಾಲ ಪ್ರತೀ ನಿತ್ಯ ಮಧ್ಯರಾತ್ರಿಯಿಂದ ನಸುಕಿನ 2 ಗಂಟೆಯ ವರೆಗೆ ಅತ್ಯಂತ ಕ್ರಿಯಾಶೀಲವಾಗಿರುವುದನ್ನು ಆಫ್ರಿಕನ್‌ ಯೂನಿಯನ್‌ ಸಿಬಂದಿಗಳು ಪತ್ತೆ ಹಚ್ಚಿದ್ದರು.

ಕಾರ್ಯಾಲಯದಲ್ಲಿ ಯಾರೂ ಇಲ್ಲದ ಮತ್ತು ಯಾವುದೇ ಕಂಪ್ಯೂಟರ್‌ ಚಟುವಟಿಕೆ ನಡೆಯದ ಹೊತ್ತಿನಲ್ಲಿ ಕಾರ್ಯಾಲಯದ ಕಂಪ್ಯೂಟರ್‌ಗಳು ಇಷ್ಟೊಂದು ಕ್ರಿಯಾಶೀಲವಾಗಿರಲು ಹೇಗೆ ಸಾಧ್ಯ ಎಂಬುದು ಸಿಬಂದಿಗಳನ್ನು ಯಕ್ಷಪ್ರಶ್ನೆಯಂತೆ ಕಾಡುತ್ತಿತ್ತು. 

Advertisement

ಈ ನಿಗೂಢ ಚಟುವಟಿಕೆಯಲ್ಲಿ ಇಲ್ಲಿನ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳು ಚೀನದ ಶಾಂಘೈ ಸರ್ವರ್‌ಗೆ ನಕಲಾಗುತ್ತಿರುವುದು ಕೊನೆಗೂ ಅವರ ಗಮನಕ್ಕೆ ಬಂತು. 

ಫ್ರೆಂಚ್‌ ಪತ್ರಿಕೆ ಲೀ ಮಾಂಡ್‌ ಜತೆಗೆ ಮಾತನಾಡಿರುವ ಮೂಲಗಳ ಪ್ರಕಾರ 2012ರ ಜನವರಿಯಲ್ಲಿ ಆಫ್ರಿಕನ್‌ ಯೂನಿಯನ್‌ (ಎಯು) ಕಟ್ಟಡ ಉದ್ಘಾಟನೆಯಾದಂದಿನಿಂದಲೂ ಇಲ್ಲಿನ ಕಂಪ್ಯೂಟರ್‌ಗಳಲ್ಲಿ ಅತ್ಯಂತ ರಹಸ್ಯ ಮಾಹಿತಿಗಳೆಲ್ಲವೂ ಪ್ರತೀ ನಿತ್ಯ ರಾತ್ರಿ ಶಾಂಘೈ ಸರ್ವರ್‌ಗೆ ನಕಲಾಗಿದೆ. 

ಎಯು ಪ್ರಧಾನ ಕಾರ್ಯಾಲಯವನ್ನು ನಿರ್ಮಿಸಿಕೊಟ್ಟದ್ದೇ ಚೀನ; ಮಾತ್ರವಲ್ಲದೆ ಅದರ ಸಮಗ್ರ ಕಂಪ್ಯೂಟರ್‌ ವ್ಯವಸ್ಥೆ ಮತ್ತು ಜಾಲಗಳನ್ನು  ಸಿದ್ಧಪಡಿಸಿಕೊಟ್ಟದ್ದು ಕೂಡ ಚೀನವೇ ಆಗಿದೆ. ಇದೆಲ್ಲವನ್ನೂ ಚೀನ ಮಾಡಿಕೊಟ್ಟದ್ದು ಟರ್ನ್ಕೀ ಒಪ್ಪಂದದ ಪ್ರಕಾರ. ಸಮಗ್ರ ನಿರ್ಮಾಣ, ಚಾಲನೆ ಸಂಪೂರ್ಣಗೊಂಡಾಗ ಚೀನ ಅದನ್ನು ಎಯು ವಶಕ್ಕೆ ಒಪ್ಪಿಸಿತ್ತು ! 

Advertisement

Udayavani is now on Telegram. Click here to join our channel and stay updated with the latest news.

Next