Advertisement

ಸಂಕಷ್ಟದಲ್ಲೂ ಗ್ರಾಪಂ ಸಿಬ್ಬಂದಿಯಿಂದ ರಕ್ತದಾನ

09:36 AM May 10, 2020 | Suhan S |

ಬೆಂಗಳೂರು: ಕೋವಿಡ್ 19 ಸಂಕಷ್ಟದಲ್ಲೂ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ, ಯಲಹಂಕ, ದಾಸನಪುರ ಮತ್ತು ಜಾಲಹಳ್ಳಿ ಹೋಬಳಿ 30 ಗ್ರಾಪಂಗಳ ಸಿಬ್ಬಂದಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. 4 ಹೋಬಳಿ ವ್ಯಾಪ್ತಿಗೆಬರುವ ರಾಜಾನುಕುಂಟೆ, ಹೆಸರುಘಟ್ಟ, ದೊಡ್ಡಜಾಲ ಚಿಕ್ಕಜಾಲ, ಹುಣಸಮಾರನಹಳ್ಳಿ ಸೇರಿ ಸುಮಾರು 39 ಗ್ರಾಪಂಗಳ ನೀರುಗಂಟಿ, ಮಹಿಳಾ ಅಧಿಕಾರಿಗಳು ಸೇರಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ರಕ್ತದಾನ ಮಾಡಿದ್ದು 80 ಯೂನಿಟ್‌ ರಕ್ತ ಸಂಗ್ರಹಿಸಿದ್ದಾರೆ.

Advertisement

ಲಯನ್ಸ್‌ ಬ್ಲಿಡ್‌ ಬ್ಯಾಂಕ್‌ ಮತ್ತು ಮಹಾವೀರ ಜೈನ್‌ ಆಸ್ಪತ್ರೆ ಸಹಯೋಗದಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಕಾರ್ಯದರ್ಶಿ ಗಳು, ಬಿಲ್‌ ಕಲೆಕ್ಟರ್‌, ನೀರುಗಂಟಿಗಳು ರಕ್ತದಾನ ಮಾಡಿದ್ದಾರೆ. ಕೋವಿಡ್ 19  ಹಿನ್ನೆಲೆಯಲ್ಲಿ ರಕ್ತದಾನಿಗಳೂ ಮನೆಯಿಂದ ಹೊರಬಂದು ರಕ್ತ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಎಲ್ಲಿಯೂ ರಕ್ತದಾನ ಶಿಬಿರ ನಡೆಯುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ರಕ್ತದ ಅವಶ್ಯಕತೆ ಇರುವವರಿಗೆ ಅನುಕೂಲವಾಗಲಿ ಎಂಬ ಮೂಲ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿತ್ತು ಎಂದು ಬೆಂಗಳೂರು ಉತ್ತರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಕಷ್ಟದಲ್ಲಿ ಇರುವವರಿಗೆ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ಶಿಬಿರದಲ್ಲಿ ರಕ್ತದಾನ ಮಾಡಿರುವುದಾಗಿ ಹುರುಳಿ ಚಿಕ್ಕನಹಳ್ಳಿ ಗ್ರಾಪಂ ಪಿಡಿಒ ನಾರಾಯಣಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next