ಸಮರ್ಥನಂ ಅಂಗವಿಕಲರ ಸಂಸ್ಥೆಯ ಕ್ರೀಡಾ ವಿಭಾಗ ಭಾರತದಲ್ಲಿನ ಅಂಧರ ಕ್ರಿಕೆಟ್ ಅಸೋಸಿಯೇಷನ್ (ಕ್ಯಾಬಿ) ಭಾರತದಲ್ಲಿ ಮೂರನೇ ಅಂಧರ ಟಿ20 ವಿಶ್ವಕಪ್ ಆಯೋಜಿಸಲಿದೆ ಎಂದು ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ಖಾತ್ರಿಪಡಿಸಿದೆ.
ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ನ 23ನೇ ವಾರ್ಷಿಕ ಸಾಮಾನ್ಯ ಸಭೆಯು ಜನವರಿ 29 ರಂದು ವರ್ಚುವಲ್ ಆಗಿ ನಡೆಯಿತು. ಈ ಸಭೆಯಲ್ಲಿ 10 ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗಿಯಾದವು.
ಕ್ಯಾಬಿ ಅಧ್ಯಕ್ಷ ಡಾ. ಮಹಾಂತೇಶ್ ಜಿ ಕಿವಡಸಣ್ಣವರ್ 2021-22 ರಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟಷ್ರೀಯ ಮಟ್ಟದಲ್ಲಿ ನಡೆದ ಪಂದ್ಯಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಇತರ ಸದಸ್ಯ ರಾಷ್ಟ್ರಗಳೂ ತಮ್ಮ ವಾರ್ಷಿಕ ವರದಿಯನ್ನು ಅತಿಥಿಗಳೆದುರಲ್ಲಿ ಮಂಡಿಸಿದರು.
ನವೆಂಬರ್ 2022ರಲ್ಲಿ ಭಾರತದ ಬೇರೆಬೇರೆ ನಗರಗಳಲ್ಲಿ ಮೂರನೇ ಅಂಧರ ಟಿ20 ವಿಶ್ವಕಪ್ ನಡೆಸುವುದಾಗಿ ಕ್ಯಾಬಿ ಸಮಿತಿಗೆ ಮನವರಿಕೆ ಮಾಡಿಕೊಟ್ಟಿತು. ಎರಡನೆ ಟಿ20 ವಿಶ್ವಕಪ್ ನಲ್ಲಿ ನಡೆದಂತೆ ಹತ್ತು ಸದಸ್ಯ ದೇಶಗಳು ಭಾಗಿಯಾಗಲು ಕ್ಯಾಬಿ ಬಯಸಿದೆ. ರೌಂಡ್ ರಾಬಿನ್ ಲೀಗ್ ಹಾಗೂ ನಾಕೌಟ್ ಆಧಾರದಲ್ಲಿ ಭಾರತಾದ್ಯಂತ 48 ಪಂದ್ಯಗಳು ನಡೆಯಲಿದೆ.
ಭಾರತದ ಪುರುಷರ ಹಾಗು ಮಹಿಳೆಯರ ಅಂಧರ ಕ್ರಿಕೆಟ್ ತಂಡಗಳು ವಿಶ್ವ ಅಂಧರ ಕ್ರಿಕೆಟ್ನಲ್ಲಿ ಆಡಲಿವೆ ಎಂದು ಕ್ಯಾಬಿ ಖಚಿತಪಡಿಸಿತು. ಈ ಬಗೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಅಸೋಸಿಯೇಷನ್ (ಐಬಿಎಸ್ಎ) ಆಯೋಜಿಸುತ್ತಿದ್ದು ಯುನೈಟೆಡ್ ಕಿಂಗ್ ಡಂನ ಬರ್ಮಿಂಗ್ ಹ್ಯಾಂನಲ್ಲಿ 18 ಹಾಗೂ 27 ಆಗಸ್ಟ್ 2023ರಲ್ಲಿ ನಡೆಯಲಿದೆ.