Advertisement

ಸಮೃದ್ಧ ಜಮಖಂಡಿ ನಿರ್ಮಾಣಕ್ಕೆ  ಆಶೀರ್ವದಿಸಿ: ಸಂಗಮೇಶ 

05:22 PM May 10, 2018 | |

ಜಮಖಂಡಿ: ನಗರ ಐತಿಹಾಸಿಕ ಪ್ರದೇಶವಾಗಿ ಗುರುತಿಸಿಕೊಂಡಿದೆ. ನೀರು ಸರಬರಾಜು, ಅಂಡರಗ್ರೌಂಡ್‌ ಡ್ರಿನೇಜ್‌, ರಸ್ತೆ ಅಗಲೀಕರಣದೊಂದಿಗೆ ಸುಗಮ ಸಂಚಾರಕ್ಕೆ ಆದ್ಯತೆ, ನಗರವಾಸಿಗಳ ಅನುಕೂಲಕ್ಕಾಗಿ ಸಾರಿಗೆ ಸಂಪರ್ಕ ವ್ಯವಸ್ಥೆ ನೀಡುವುದೇ ನನ್ನ ಸಂಕಲ್ಪವಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ಅಭಿಮಾನಿ ಬಳಗದಿಂದ ಬೃಹತ್‌ ರ್ಯಾಲಿ ಮತ್ತು ಮಹಾಸಮಾವೇಶದಲ್ಲಿ ಅವರು ಮಾತನಾಡಿದರು.

ತಾಲೂಕಿನ ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸಿ ಕೆರೆ ತುಂಬಿಸುವ ಮೂಲಕ ಅಂತರ್ಜಲಮಟ್ಟ ಸುಧಾರಣೆಗೆ ಮುಂದಾಗುವುದು. ಕಬ್ಬು ಬೆಳಗಾರರು ಹೆಚ್ಚಾಗಿರುವುದರಿಂದ ಕಬ್ಬು ಸಂಶೋಧನಾ ಕೇಂದ್ರದ ಸ್ಥಾಪನೆ ಮತ್ತು ಸಾವಳಗಿ ಭಾಗದಲ್ಲಿ ದ್ರಾಕ್ಷಿ ಸಂಸ್ಕರಣ ಘಟಕದ ಆರಂಭಿಸುವ ಮಹತ್ವಾಕಾಂಕ್ಷೆ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ದಿಗೊಳಿಸಿ ಪ್ರತಿ ಗ್ರಾಮಗಳಲ್ಲೂ, ರಸ್ತೆ, ನೀರು, ವಿದ್ಯುತ್‌, ಶಿಕ್ಷಣ ಆರೋಗ್ಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಿ ಆದರ್ಶ ಗ್ರಾಮ ನಿರ್ಮಾಣ ಮಾಡುವ ಗುರಿ ಹೊಂದ್ದಿದ್ದೇನೆ ಎಂದರು.

ನನ್ನ ಪ್ರತಿ ಮಗುವಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕು. ಸೃಜನಾತ್ಮಕವಾಗಿ ಬೆಳೆಯಬೇಕು. ಅರ್ಥಪೂರ್ಣ ಶಿಕ್ಷಣ ಎಲ್ಲರೂ ಸಾಕ್ಷರರಾಗದ ಹೊರತು ಯಾವುದೇ ಸಮಾಜದ ಅಭಿವೃದ್ದಿ ಸಾಧ್ಯವಿಲ್ಲ. ಎಲ್ಲರಿಗೂ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ದೆಸೆಯಲ್ಲಿ ನನ್ನ ಮತಕ್ಷೇತ್ರದ ಪ್ರತಿ ಮಗುವಿನ ಶಿಕ್ಷಣದ ಜವಾಬ್ದಾರಿ ನನ್ನದು. ತಮ್ಮ ಸೇವೆ ಮಾಡುವ ಸಂಕಲ್ಪದೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಬೆಂಬಲಿಸಿ ಆಶೀರ್ವದಿಸಿ ಎಂದರು.

ವೇದಿಕೆಯಲ್ಲಿ ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಂಜಯ ಕುಲಕರ್ಣಿ, ಜಿ.ಕೆ. ಮಠದ, ವೈ. ಕಾಳೆ, ಯು.ಕೆ.ಗಸ್ತಿ, ಪಿ. ಎನ್‌. ಪಾಟೀಲ, ಡಾ| ಉಮೇಶ ಮಹಾಬಳಶೆಟ್ಟಿ, ಎಸ್‌.ಕೆ.ಪಾಟೀಲ, ರಾಮಣ್ಣ ಹಿಪ್ಪರಗಿ, ಸತಗೌಡ ನ್ಯಾಮಗೌಡ, ರಾಜುಗೌಡ ಪಾಟೀಲ, ಭರತೇಶ ನರಸಗೊಂಡ, ಶೀತಲ ಮಗದುಮ್ಮ, ಶಾಸಪ್ಪ ಉಳ್ಳಾಗಡ್ಡಿ, ನಂದು ಕೋಲೂರ, ಪಿ.ಎಂ. ಝುಲಪಿ, ರಾಜೇಶ ಟೋಪೆ, ಡೊಗಲೆ, ಮಹೇಶ ಖೆಬ್ಟಾನಿ, ಬಿ.ಟಿ. ಹಿಪ್ಪರಗಿ, ರಾಜೇಸಾಬ ಕಡಕೋಳ, ಭೀಮಶಿ ನಡುವಿನಮನಿ ಇದ್ದರು. ನಿವೃತ್ತ ಪೊಲೀಸ್‌ ಅ ಧಿಕಾರಿ ಪಿ.ಎನ್‌. ಪಾಟೀಲ ಸ್ವಾಗತಿಸಿದರು. ಜಿ.ಕೆ.ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next