Advertisement

ಕಪ್ಪು ಹಣ: ಬ್ಯಾಂಕ್‌ನ ಹಳೆ  ವ್ಯವಹಾರದ ಮೇಲೆ ಕಣ್ಣು

03:45 AM Jan 07, 2017 | Team Udayavani |

ಹೊಸದಿಲ್ಲಿ: ಕಪ್ಪು ಕುಳಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ, ಕಾಳಧನವನ್ನು ಹೊರ ಗೆಳೆಯಲು ಆರು ವರ್ಷಗಳ ಹಿಂದಿನ ಬ್ಯಾಂಕ್‌ ವ್ಯವಹಾರಗಳನ್ನೂ ಪರಿಶೀಲಿ ಸಲು ಮುಂದಾಗಿದೆ.

Advertisement

ಈ ಬೆಳವಣಿಗೆಯಿಂದಾಗಿ, ಅಪ ಮೌಲ್ಯದ ಸಂದರ್ಭ ಕಳ್ಳ ದಾರಿ ಬಳಸಿ ಕಾಳಧನವನ್ನು ಸಕ್ರಮ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಕಪ್ಪು ಕುಳಗಳು ಮತ್ತೆ ಬೆಚ್ಚಿಬೀಳುವಂತಾಗಿದೆ. ಹಳೆಯ ಹಣಕಾಸು ವ್ಯವಹಾರ ಗಳನ್ನೂ ಪರಿಶೀಲಿಸಲು ತೆರಿಗೆ ಅಧಿಕಾರಿ ಗಳಿಗೆ ಅನುವು ಮಾಡಿಕೊಡುವ ಸಂಬಂಧ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ನಿರ್ಧರಿ ಸಿದೆ. ಮುಂದಿನ ಬಜೆಟ್‌ನಲ್ಲೇ ಈ ಕುರಿತ ಘೋಷಣೆ ಹೊರಬೀಳಲಿದೆ. ಇದರಿಂದಾಗಿ ಹಳೆಯ ಕೇಸುಗಳನ್ನು ತೆರೆಯಲು ತೆರಿಗೆ ಅಧಿಕಾರಿಗಳಿಗೆ ಅನುಮತಿ ದೊರೆಯಲಿದೆ. 40 ವರ್ಷ ಅಥವಾ ಅದಕ್ಕೂ ಹಿಂದೆ ಸೃಷ್ಟಿಯಾದ ಕಪ್ಪು ಹಣವನ್ನೂ ಪತ್ತೆ ಮಾಡ ಬಹುದಾಗಿದೆ ಎಂದು ಹಿರಿಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಎಂದರೆ, ದಶಕಗಳ ಹಿಂದೆ ಅಕ್ರಮವಾಗಿ ಸಂಪತ್ತು ಗಳಿಸಿದ ವ್ಯಕ್ತಿ ಗಳು ಪರಿಶೀಲನೆ ವೇಳೆ ಸಿಕ್ಕಿಬಿದ್ದರೆ, ಆಸ್ತಿ ಖರೀದಿಸಿದ ವರ್ಷ ಯಾವುದೇ ಇರಲಿ, ಆಸ್ತಿಯ ಈಗಿನ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
 

Advertisement

Udayavani is now on Telegram. Click here to join our channel and stay updated with the latest news.

Next