Advertisement

ಮಹಾಲಿಂಗಪುರ ಪಟ್ಟಣಕ್ಕೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್

07:56 PM May 17, 2021 | Team Udayavani |

ಮಹಾಲಿಂಗಪುರ : ಮಹಾಮಾರಿ ಕೊರೊನಾ ಅಬ್ಬರದ ನಡುವೆ ಸೋಮವಾರ ಪಟ್ಟಣದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗುವ ಮೂಲಕ ಮಹಾಲಿಂಗಪುರ ಜನತೆಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Advertisement

ಪಟ್ಟಣದ ಕೆಂಗೇರಿಮಡ್ಡಿಯ 30 ವರ್ಷದ ಮಹಿಳೆಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಒಂದು ವಾರದ ಹಿಂದೆ ಕೆಂಗೇರಿಮಡ್ಡಿಯ ಒಂದೇ ಮನೆಯ 6 ಜನರಿಗೆ ಕೊರೊನಾ ವಕ್ಕರಿಸಿತ್ತು. ಅದೇ ಮನೆಯ ಈ ಮಹಿಳೆಗೆ ಕೊರೊನಾ ಪಾಜಿಟೀವ್ ಆಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು.

ಕೊರೊನಾ ಕಡಿಮೆಯಾಗಿ ಬಾಗಲಕೋಟೆಯಿಂದ ಮನೆಗೆ ಮರಳಿದ್ದರು. ಸೋಮವಾರ ಕಣ್ಣಿನ ಸುತ್ತಮುತ್ತ ಕಪ್ಪು ಕಲೆಗಳಾಗಿ, ಆರೋಗ್ಯದಲ್ಲಿ ಸಮಸ್ಯೆಯಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಾಗ, ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡು ಬಂದ ಕಾರಣ ವೈದ್ಯರು ಅವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ :ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ : ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next