ಕಾಂಗ್ರೆಸ್‌ನವರು ಟಿಪ್ಪು ಸುಲ್ತಾನ್ ಹೆಸರು ಹೇಳಿಕೊಂಡು ಹೋಗಬೇಕು: ರವಿಕುಮಾರ್ ವಾಗ್ದಾಳಿ
ಕೊಪ್ಪಳ : ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದವರ ರಕ್ಷಣೆ ಮಾಡಲಾಗುತ್ತಿದೆ. ತುಷ್ಠೀಕರಣದ ಪರಾಕಾಷ್ಠೆಯಲ್ಲಿದೆ. ಎ. ರಾಜಾ ಅವರು, ಭಾರತ ಒಂದು ದೇಶವೇ ಅಲ್ಲ ಎಂದಿದ್ದಾರೆ. ಎಂಪಿ ಚುನಾವಣೆಯಲ್ಲಿ ಜನರು ಇದಕ್ಕೆ ಉತ್ತರ ಕೊಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪಿಎಫ್‌ಐ, ಕೆಎಫ್‌ಡಿ ಮೇಲಿನ ಕೇಸ್‌ಗಳನ್ನು ಕಾಂಗ್ರೆಸ್ ಸರಕಾರ ವಾಪಾಸ್ ಪಡೆಯಿತು. ಅದಕ್ಕೆ ಇದು ಟಿಪ್ಪು ಸುಲ್ತಾನ್ ಸರಕಾರ ಅಂತ ನಾನು ಹೇಳುತ್ತೇನೆ. ಮಠಗಳಿಗೆ ದುಡ್ಡು ಕೊಟ್ಟಿದ್ದನ್ನು ಕೊಡದ ಸರಕಾರವಿದು. ಕೊಪ್ಪಳ ಗವಿಮಠಕ್ಕೆ ನೀಡಿದ್ದ 10 ಕೋಟಿ ಅನುದಾನದಲ್ಲಿ ಇನ್ನೂ ಏಳೂವರೆ ಕೋಟಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಡಲು ಆಗದ ಸರಕಾರ. ಆದರೆ ಅಬಕಾರಿ ಇಲಾಖೆಗೆ ಶೇಕಡಾ 6 ರಷ್ಟು ಹೆಚ್ಚಿಸುವ ಟಾರ್ಗೆಟ್ ಕೊಡುತ್ತಾರೆ. ಕಾಂಗ್ರೆಸ್ ಸರಕಾರದಲ್ಲಿ ರೈತ ಸ್ನೇಹಿ, ಜನಸ್ನೇಹಿ, ಉದ್ಯಮ ಸ್ನೇಹಿ ಸರಕಾರವಲ್ಲ. ಇದು ಟಿಪ್ಪು ಸುಲ್ತಾನ್ ಸರಕಾರ, ಈ ಸರಕಾರದ ವಿರುದ್ಧ ದೊಡ್ಡ ಆಂದೋಲನ ಮಾಡುತ್ತೇವೆ ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ರಾಮ ಮಂದಿರಕ್ಕಾಗಿ 500 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಕಾಂಗ್ರೆಸ್‌ನವರು ಬರಿ ಟಿಪ್ಪು ಸುಲ್ತಾನ್ ಹೆಸರು ಹೇಳಿಕೊಂಡು ಹೋಗಬೇಕು ಬೇರೆ ದಾರಿ ಇಲ್ಲ. ಅಲ್ಪ ಸಂಖ್ಯಾತರು ದೇಶಪ್ರೇಮಿಗಳು ಇದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇನ್ನೂ ಕಡಿಮೆ ಸೀಟ್ ಬರುತ್ತದೆ. ಸಿದ್ದರಾಮಯ್ಯ ಅವರ ಮತ್ತೊಂದು ಹೆಸರೇ ಸುಳ್ಳು ಎಂದರು.
ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಬಿಟ್ಟರೆ ಬಿಜೆಪಿಯಲ್ಲಿ ಕಾಂಗ್ರೆಸ್‌ಗೆ ಹೋಗುವವರು ಯಾರೂ ಇಲ್ಲ ಎಂದು ಹೇಳಿದರು.