Advertisement

ಬಿಜೆಪಿಯ ಸಾಧನೆಯೇ ಗೆಲುವಿಗೆ ಶ್ರೀರಕ್ಷೆ: ಖೂಬಾ

02:53 PM Feb 06, 2021 | Team Udayavani |

ಬೀದರ: ರಾಜ್ಯ-ಕೇಂದ್ರ ಬಿಜೆಪಿ ಸರ್ಕಾರದ ಜನಪರ ಆಡಳಿತ ಮತ್ತು ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಜತೆಗೆ ಬಸವಕಲ್ಯಾಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ನೀಡಿರುವ ಉತ್ತಮ ಕೊಡುಗೆ ಮುಂಬರುವ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

Advertisement

ಬಸವಕಲ್ಯಾಣ ಉಪ ಚುನಾವಣೆಗಾಗಿ ಉಸ್ತುವಾರಿಯಾಗಿ ನೇಮಿಸಿದ ಹಿನ್ನಲೆ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಅವರಿಗೆ ಸನ್ಮಾನಿಸಿ ಉಪಚುನಾವಣೆ ಕುರಿತು ಚರ್ಚಿಸಿದ್ದಾರೆ. ಕ್ಷೇತ್ರದಲ್ಲಿ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಪಕ್ಷದ ವರಿಷ್ಠರು ಅರ್ಹರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಳಿಕ ಉಳಿದ ಆಕಾಂಕ್ಷಿಗಳು, ಮುಖಂಡರು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಂಪೂರ್ಣಶ್ರಮ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಸ ಹಾಕುವ ಸ್ಥಳದಲ್ಲಿ ರಂಗೋಲಿ: ಜಾಗೃತಿ

ಪಕ್ಷದ ಕ್ರಿಯಾಶೀಲ ಸಂಘಟನೆ ಎಲ್ಲಾ ಸ್ಥರದಲ್ಲಿಯೂ ಗಟ್ಟಿಯಾಗಿ ಸಕ್ರಿಯವಾಗಿದ್ದು, ಈಗಾಗಲೇ ಚುನಾವಣೆಗೆ ತಯ್ನಾರಿ ಸಭೆ ನಡೆಸಲಾಗಿದೆ. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿ ಬಿಜೆಪಿ ಸಾಧನೆಗಳು ತಿಳಿಸಿಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷಕ್ಕೆಗೆಲುವನ್ನು ತಂದುಕೊಡಲಿದ್ದೇವೆ ಎನ್ನುವ  ವಿಶ್ವಾಸವನ್ನು ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next