Advertisement

ಮೈತ್ರಿ ಸರ್ಕಾರದ ವಿರುದ್ಧ ಹೋರಾಟ:ಫೀಲ್ಡ್‌ಗಿಳಿದ ಬಿಜೆಪಿಯ 6 ತಂಡಗಳು 

04:32 PM Jun 15, 2018 | Team Udayavani |

ಬೆಂಗಳೂರು: ಅಧಿಕಾರ ಕಳೆದುಕೊಂಡು ಗಾಯಗೊಂಡ ಹುಲಿಯಂತಿರುವ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರದ ವಿರುದ್ಧ  ಹೋರಾಟ ತೀವ್ರ ಗೊಳಿಸಿರುವ ವೇಳೆಯಲ್ಲಿ ಪಕ್ಷದ ವತಿಯಿಂದ ಇನ್ನಷ್ಟು ಹೋರಾಟಕ್ಕೆ ಸಿದ್ದತೆಗಳು ನಡೆದಿವೆ. 

Advertisement

ರೈತ ಸಾಲಾಮನ್ನಾ ಗೆ ತೀವ್ರ ಹೋರಾಟ ಮಾಡಿರುವ ಬಿಜೆಪಿ ರೈತರ ಸಮಸ್ಯೆಗಳನ್ನು ಅರಿಯಲು ರೈತ ಮೋರ್ಚಾದ 6 ತಂಡಗಳನ್ನು ಸಿದ್ಧ ಮಾಡಿ 15 ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿ ಅನ್ನದಾತನ ಬವಣೆ ಪಟ್ಟಿಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ. 

ಫೀಲ್ಡ್‌ನಲ್ಲಿ ರೈತರ ಎಲ್ಲಾ ಸಮಸ್ಯೆಗಳ ಪಟ್ಟಿ ಸಿದ್ದಮಾಡಿ ಕೊನೆಗೆ ಯಡಿಯೂರಪ್ಪ ಅವರಿಗೆ ನೀಡಲಿದ್ದಾರೆ. ಸರ್ಕಾರ ಸಾಲ ಮನ್ನಾ ಮಾಡದೇ ಇರುವ ಜನರಿಗೆ ಮನವರಿಕೆ ಮಾಡಲು, ಪ್ರಧಾನಿ ನರೇಂದ್ರ ಮೋದಿ ಅವರ ರೈತ ಪರ ಯೋಜನೆಗಳನ್ನು ರೈತರಿಗೆ ವಿವರಿಸುವಂತೆ ಬಿಎಸ್‌ವೈ ಸೂಚಿಸಿದ್ದಾರೆ. 

ತಂಡಗಳು ಇಂತಿದೆ 

ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್‌ ಸವದಿ ನೇತೃತ್ವದಲ್ಲಿ  ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ನಡೆಯಲಿದೆ. 

Advertisement

ಶಂಕರ್‌ಗೌಡ ಪಾಟೀಲ್‌ ನೇತೃತ್ವದಲ್ಲಿ ಬಳ್ಳಾರಿ, ಬೀದರ್, ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರಿನಲ್ಲಿ ಪ್ರವಾಸ ನಡೆಯಲಿದೆ.

ಈಶ್ವರ್‌ ಚಂದ್ರ ಹೊಸಮನಿ ನೇತೃತ್ವದ ತಂಡ ಹಾವೇರಿ, ಗದಗ್‌, ಧಾರವಾಡ , ಕೊಪ್ಪಳ ಮತ್ತು ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಲಿದೆ. 

ನಂಜುಂಡೇಗೌಡರ ನೇತೃತ್ವದ ತಂಡ ಮೈಸೂರು, ಹಾಸನ, ಕೊಡಗು , ಮಂಡ್ಯ  ಮತ್ತು, ಚಾಮರಾಜನಗರದಲ್ಲಿ ಪ್ರವಾಸ ಮಾಡಲಿದೆ. 

ಪವಿತ್ರಾ ರಾಮಯ್ಯ ನೇತೃತ್ವದ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಪ್ರವಾಸ ಮಾಡಲಿದೆ. 

ಶಿವಪ್ರಸಾದ್‌ ನೇತೃತ್ವದ ತಂಡ ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next