Advertisement

BJP ; ಜಿ.ಪಂ.,ತಾ.ಪಂ.ಚುನಾವಣೆ: 7 ತಂಡಗಳ ರಾಜ್ಯ ಪ್ರವಾಸ

02:55 PM Jun 16, 2023 | Team Udayavani |

ಶಿವಮೊಗ್ಗ: ಜಿ.ಪಂ., ತಾ.ಪಂ. ಚುನಾವಣೆ ದೃಷ್ಟಿಯಿಂದ ರಾಜ್ಯದಾದ್ಯಂತ ಜೂನ್ 22 ಹಾಗು 23 ರಂದು ಬಿಜೆಪಿಯ 7 ತಂಡ ಪ್ರವಾಸ ಮಾಡಲಿದ್ದು,ನನ್ನ ನೇತೃತ್ವದಲ್ಲಿ ಒಂದು ತಂಡ ಹುಬ್ಬಳ್ಳಿ, ಗದಗ, ಹಾವೇರಿಯಲ್ಲಿ ಪ್ರವಾಸ ಮಾಡಲಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಆಗಿದೆ. ಈ ಸರಕಾರ ನೇರವಾಗಿ ಹಿಂದೂ ವಿರೋಧಿ. ಬಡಜನರಿಗೆ ಮೋಸ ಮಾಡುವ ಸರಕಾರ. ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದರು.ಕೇಂದ್ರ ಸರಕಾರ ಐದು ಕೆಜಿ ಕೊಡುತ್ತಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಕೊಡುವ ಸಂದರ್ಭದಲ್ಲಿ ಮೋದಿ ಅವರಿಗೆ ಈ ಬಗ್ಗೆ ಕೇಳಿದ್ಧರೆ? ಅವರಿಗೆ ಕೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಾ? ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಿ. ಬಡವರ ಶಾಪ ತಟ್ಟೇ ತಟ್ಟುತ್ತದೆ ಎಂದು ಕಿಡಿ ಕಾರಿದರು.

ಪದವೀಧರ ಯುವಕರಿಗೆ ಮೂರು ಸಾವಿರ ಕೊಡ್ತೀವಿ ಅಂದರು, ಈ ವರ್ಷ ಪಾಸಾಗಿರುವ ಯುವಕರಿಗೆ ಅಂತೇಳಿ ಮೋಸ ಮಾಡಿದರು. ವಿದ್ಯುತ್ ಏರಿಕೆ ಮಾಡಿ ಆಹಾಕಾರ ಎದ್ದಿದೆ. ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಜನರಿಗೆ ಬೇಕಾದಂತಹ ಸರಕಾರ ಆಗಬೇಕು. ವಿದ್ಯುತ್ ದರ ಬಿಜೆಪಿ ಏರಿಕೆ ಮಾಡಿದ್ದು, ನಾವಲ್ಲ ಅಂತಾರೆ. ಅಕ್ಕಿ ಕೇಂದ್ರ ಸರಕಾರ ಕೊಡ್ತಿಲ್ಲ ಅಂತೇಳಿ ಪಲಾಯನ ಮಾಡ್ತಿದ್ದಾರೆ ಎಂದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ವಾಗತ ಮಾಡ್ತೇನೆ. ಖಾಸಗಿ ಬಸ್ ಮುಚ್ಚುವ ಸ್ಥಿತಿ, ಆಟೋ ಚಾಲಕರಿಗೆ ಹೊಟ್ಟೆಗೆ ಅನ್ನ ಇಲ್ಲ.ಖಾಸಗಿ ಬಸ್, ಆಟೋದವರಿಗೂ ಉಚಿತ ಕೊಡಿ. ಹೆಣ್ಣು ಮಕ್ಕಳಿಗೆ ಹಣ ಕೊಡುತ್ತೇವೆ ಅಂತೇಳಿ ಅರ್ಜಿ ಹಾಕೋದನ್ನೇ ಮುಂದು ಹಾಕ್ತಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲಾ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಅಂದರು. ಸರಕಾರ ಬಂದು ಒಂದು ತಿಂಗಳು ಆದರೂ ಕೊಟ್ಟಿಲ್ಲ. ಎಲ್ಲರಿಗೂ ಮೋಸ ಮಾಡಿ ಅಧಿಕಾರಕ್ಕೆ ಬಂದರು. ಇಂತಹ ಅಧಿಕಾರ ಬೇಕಿತ್ತಾ? ಮೋಸ ಅಂತೂ ಮಾಡಿದ್ದೀರಿ, ನೀವು ಅಕ್ಕಿ ಎಲ್ಲಿಂದ ತರುತ್ತೀರಾ ಗೊತ್ತಿಲ್ಲ ಅಕ್ಕಿ ಕೊಡಿ, ಇಲ್ಲದಿದ್ದರೆ ಬಡವರ ಅಕೌಂಟ್ ಗೆ ಹಣವನ್ನು ಹಾಕಿ ಎಂದರು.

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಬಲತ್ಕಾರವಾಗಿ ಮತಾಂತರ ಮಾಡಿದರೇ ಏನು ಮಾಡುತ್ತೀರಿ?ಕೇರಳ ಸ್ಟೋರಿ‌ ಸಿನಿಮಾ ನೋಡಿದ್ದೀರಾ? ಮುಸ್ಲಿಮರನ್ನು ಮೆಚ್ಚಿಸಲು ಈ‌ ಕಾಯ್ದೆ ಹಿಂಪಡೆಯುತ್ತಿದ್ದೀರಾ?ಹಿಂದುಗಳಿಗೆ ಅಪಮಾನ ಮಾಡ್ತಿದ್ದೀರಾ? ಈ ಕಾಯ್ದೆ ಹಿಂಪಡೆದರೆ ಲವ್ ಜಿಹಾದ್ ಆರಂಭವಾಗುತ್ತದೆ. ಸರಕಾರ ಬರುತ್ತೆ ಹೋಗುತ್ತೆ ಶಾಶ್ವತವಲ್ಲ. ಬಡವರ ರಕ್ಷಣೆಗೆ, ರಾಜ್ಯ ರಕ್ಷಣೆಗೆ ಏನು ಮಾಡಿದಿರಿ ಎಂದು ಜನ ಕೇಳ್ತಾರೆ. ಒಂದು ತಿಂಗಳಿಗೆ ಈ ಸರಕಾರ ಯಾಕಾದರೂ ಬಂತೋ ಅಂತಿದ್ದಾರೆ ಜನ. ತತ್ ಕ್ಷಣ ಮತಾಂತರ ಕಾಯ್ದೆ ಹಿಂಪಡೆಯುವುದನ್ನು ರದ್ದು ಮಾಡಬೇಕು. ಮತಾಂತರ ನಿಷೇಧ ಕಾಯ್ದೆ ಮುಂದುವರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ‌ಪ್ರಬಲ ಹೋರಾಟ ಮಾಡಬೇಕಾಗುತ್ತದೆ ಎಂದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್ – ಬಿಜೆಪಿ ಹೊಂದಾಣಿಕೆ ರಾಜಕಾರಣ ಆರೋಪಕ್ಕೆ ಸಮಬಂಧಿಸಿ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಸಿ.ಟಿ.ರವಿ ಜೊತೆ ಪ್ರತಾಪ್ ಸಿಂಹ ಜೊತೆ ಚರ್ಚೆ ಮಾಡಿಲ್ಲ. ಅವರ ಜತೆ ಈ ಬಗ್ಗೆ ನಾನು ಚರ್ಚೆ ಮಾಡ್ತೇನೆ. ಈ ಬಗ್ಗೆ ಕೇಂದ್ರದ ನಾಯಕರ ಜತೆ ಮಾತನಾಡುತ್ತೇನೆ. ಈ ರೀತಿ ಹೊಂದಾಣಿಕೆ ನಡೆದಿದ್ದೇ ಆಗಿದ್ದರೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next