Advertisement

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

09:00 PM Dec 26, 2024 | Team Udayavani |

ನವದೆಹಲಿ: ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದು 100 ವರ್ಷದ ಕಾರ್ಯಕ್ರಮಗಳಿಂದ ಬಿಜೆಪಿಗೆ ಆತಂಕ ಉಂಟಾಗಿದೆ. ಹೀಗಾಗಿಯೇ ಆ ಪಕ್ಷ ಭಾರತದ ಭೂಪಟ ತಿರುಚಲಾಗಿದೆ ಎಂಬ ವಿಚಾರವನ್ನು ಮುಂದಿಡುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯರ್ಶಿ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ.

Advertisement

ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎನ್ನುವುದು ಆಧುನಿಕ ಈಸ್ಟ್‌ ಇಂಡಿಯಾ ಕಂಪನಿ. ಅದಕ್ಕೆ ಮಹತ್ಮಾ ಗಾಂಧಿಯವರ ತತ್ವಾದರ್ಶಗಳ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮದಿಂದ ಚಿಂತೆ ಶುರುವಾಗಿದೆ.

“ಭಾರತದ ಸಂವಿಧಾನವನ್ನು ದೂರವಿಟ್ಟ, ತ್ರಿವಣ ಧ್ವಜವನ್ನು ದಶಕಗಳ ಕಾಲ ಹಾರಿಸದ, ನಾಥೂರಾಮ್‌ ಗೋಡ್ಸೆ ಅನುಯಾಯಿಗಳು ಪ್ರತಿಯೊಂದರಲ್ಲೂ ಕ್ಷುಲ್ಲಕ ವಿಚಾರಗಳನ್ನು ಹುಡುಕುವುದನ್ನು ನಿಲ್ಲಿಸಬೇಕು. ಗಾಂಧೀಜಿ ಬದುಕಿದ್ದಾಗಲೂ ಅವರನ್ನು ವಿರೋಧಿಸಿದ, ಅವರ ಹತ್ಯೆಯ ಬಳಿಕವೂ ಅವರ ಸಿದ್ಧಾಂತಗಳನ್ನು ನಾಶಪಡಿಸಲು ಬಿಜೆಪಿಯವರು ಯತ್ನಿಸಿದ್ದಾರೆ’ ಎಂದು ಆರೋಪಿಸಿದರು.

ಗಾಂಧೀಜಿ ಲಕ್ಷಾಂತರ ಭಾರತೀಯರ ಹೃದಯದಲ್ಲಿದ್ದಾರೆ ಎಂಬುದನ್ನು ಬಿಜೆಪಿಯವರು ಮರೆಯಬಾರದು ಎಂದು ಸುರ್ಜೇವಾಲಾ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next