Advertisement

BJP Workers; ಪ್ರತೀ ಬೂತ್‌ನಿಂದ 200 ಸದಸ್ಯರು: ಬಿಜೆಪಿ ಗುರಿ

12:41 AM Aug 25, 2024 | Team Udayavani |

ಬೆಂಗಳೂರು: ಜನಸಂಪರ್ಕದ ಮೂಲಕ ವಿಚಾರಧಾರೆ ವಿಸ್ತರಣೆಯಾಗಬೇಕು ಎಂದು ಕರೆ ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್‌ ಸಿನ್ಹಾ, ಪ್ರತೀ ಬೂತ್‌ನಿಂದ ಕನಿಷ್ಠ 200 ಸದಸ್ಯರನ್ನು ನೋಂದಣಿ ಮಾಡುವ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ ಪಡೆಯುವಂತೆ ನಿರ್ದೇಶನ ನೀಡಿದರು.
ರಾಜ್ಯದಲ್ಲಿ 1.50 ಕೋಟಿ ಸದಸ್ಯತ್ವ ನೋಂದಣಿಯ ಗುರಿ ಹೊಂದಿರುವ ಬಿಜೆಪಿ ಸೆಪ್ಟಂಬರ್‌ 2ರಿಂದ ಆರಂಭಿಸಲಿ
ರುವ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸಲು ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಾಗಾರ ನಡೆಸಿತು.

Advertisement

ಕಾರ್ಯಾಗಾರಕ್ಕೆ ಚಾಲನೆ ನೀಡಿದ ರಿತುರಾಜ್‌ ಸಿನ್ಹಾ, ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹಸಚಿವ ಅಮಿತ್‌ ಶಾ ಉಪಸ್ಥಿತಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಾಗಾರ ನಡೆದಿದೆ. ಹಲವಾರು ರಾಜ್ಯಗಳಂತೆ ಕರ್ನಾಟಕದಲ್ಲೂ ಕಾರ್ಯಾಗಾರ ನಡೆಯುತ್ತಿದ್ದು, ವಿರಾಟ್‌ ಬಿಜೆಪಿ ಪರಿವಾರಕ್ಕೆ ನಮ್ಮ ನಮ್ಮ ಹೆಸರನ್ನು ಮತ್ತೆ ನೋಂದಾಯಿಸುವ ಜತೆಗೆ ಹೊಸ ಸದಸ್ಯರನ್ನೂ ಪರಿಚಯಿಸಬೇಕು ಎಂದು ಮನವಿ ಮಾಡಿದರು.

ಸಪ್ತ “ಟಿ’ ಥೆರಪಿ
ಪ್ರತೀ ಬೂತ್‌ನಲ್ಲಿ ಕನಿಷ್ಠ 200 ಸದಸ್ಯ ರನ್ನು ನೋಂದಣಿ ಮಾಡಲು ಪ್ರಯತ್ನಿಸಿ. ಟಾಸ್ಕ್, ಟೈಮ್‌ಲೈನ್‌, ಟೀಂ, ಟಾರ್ಗೆಟ್‌, ಟ್ರ್ಯಾಕಿಂಗ್‌, ಟ್ರಾವೆಲಿಂಗ್‌, ಟಚ್‌ ಥೆರಪಿ ಮೊದಲಾದವುಗಳ ಮೂಲಕ ಗುರಿ ಸಾಧಿಸಿ. ಜನಸಂಪರ್ಕ ಮೂಲಕ ವಿಚಾರ ಧಾರೆ ವಿಸ್ತರಣೆ ಆಗಬೇಕಿದೆ ಎಂದರು.

ರಾಜ್ಯ ಸಹ ಪ್ರಭಾರಿ ಸುಧಾಕರ ರೆಡ್ಡಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್‌ ರೆಡ್ಡಿ, ಪಿ. ರಾಜೀವ್‌, ಸುನಿಲ್‌ ಕುಮಾರ್‌, ಪ್ರೀತಂ ಗೌಡ, ಶಾಸಕರಾದ ಮಹೇಶ್‌ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ…, ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಸಂಸದ ಪಿ.ಸಿ. ಮೋಹನ್‌ ಇತರರಿದ್ದರು. ಬಿಜೆಪಿ ರಾಜ್ಯಾ
ಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಯಾನದ ಲಾಂಛನ ಮತ್ತು ಮಿÓx… ಕಾಲ್‌ ಸಂಖ್ಯೆಯನ್ನು ಬಿಡುಗಡೆ ಮಾಡಿದರು.

Advertisement

ಹೀಗಿರಲಿದೆ ನೋಂದಣಿ ಪ್ರಕ್ರಿಯೆ
ಸೆ. 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಮಿಸ್ಡ್ಕಾಲ್‌ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಮಾಡಲಿದ್ದಾರೆ. ಕರ್ನಾಟಕದಲ್ಲಿ 1.50 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಇದೆ. ಮಿಸ್ಡ್ಕಾಲ್‌ ಕೊಟ್ಟ ಅನಂತರ ಅರ್ಜಿ ನಮೂನೆ ಹಾಗೂ ಒನ್‌ ಟೈಮ್‌ ಪಾಸ್‌ ವರ್ಡ್‌ ಬರಲಿದೆ. ಅರ್ಜಿಯನ್ನು ಭರ್ತಿ ಮಾಡಿ, ಫೋಟೋ ಕೂಡ ಅಪ್‌ಲೋಡ್‌ ಮಾಡಿದ ಅನಂತರವಷ್ಟೇ ಸದಸ್ಯತ್ವ ನೋಂದಣಿಯಾಗಲಿದೆ.

ತಿಂಗಳ ಕಾಲ ಅಭಿಯಾನ: ಸುನಿಲ್‌
ಸಭೆಯ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿ, ಮಿಸ್ಡ್ ಕಾಲ್‌ ಕೊಟ್ಟು ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು 8800002024 ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದೇವೆ. ಬೂತ್‌ ಅಧ್ಯಕ್ಷರಿಂದ ಆರಂಭಿಸಿ ಎಲ್ಲ ಹಂತದ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರಿಂದ ಎಲ್ಲ ಹಂತದ ಜನಪ್ರತಿನಿಧಿಗಳು ಒಂದು ತಿಂಗಳ ಕಾಲ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಜೋಡಿಸಿಕೊಳ್ಳಲು ಕರೆ ಕೊಡಲಾಗಿದೆ. ಬಿಜೆಪಿ ಸದಸ್ಯರಾಗುವುದು ಎಂದರೆ ವಿಕಸಿತ ಭಾರತಕ್ಕೆ ಸಾಕ್ಷಿಗಳಾಗುವುದು ಎಂದು ವಿಶ್ಲೇಷಿಸಿದರು.

ನಮ್ಮದು ಪ್ರಜಾಪ್ರಭುತ್ವ ಇರುವ ಪಕ್ಷ. ಹೆಚ್ಚು ಸದಸ್ಯರಾದಷ್ಟು ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುತ್ತದೆ. ಸದಸ್ಯತ್ವ ಅಭಿಯಾನವು ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಬೂತ್‌ಗಳಲ್ಲಿ ಕಾರ್ಯಪ್ರವೃತ್ತರಾಗಬೇಕು.
– ಆರ್‌. ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಪ್ರತೀ ಬೂತ್‌ನಲ್ಲಿ ಕನಿಷ್ಠ 200 ರಿಂದ 300ರಷ್ಟಾದರೂ ಸದಸ್ಯತ್ವ ನೋಂದಣಿ ಮಾಡಿಸಬೇಕು. 1.50 ಕೋಟಿ ಸದಸ್ಯತ್ವ ನೋಂದಣಿಯ ಗುರಿ ಮುಟ್ಟಬೇಕು. ಮುಂಬರುವ ಪಂಚಾಯತ್‌ ಚುನಾವಣೆಗಳಿಗೆ ಅನುಕೂಲ ಆಗಬೇಕು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ಇರುವ ಹಗರಣಗಳ ಬಗ್ಗೆಯೂ ಜನರಿಗೆ ತಿಳಿಸಬೇಕು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next