Advertisement

ಬಿಹಾರ ಉಪಚುನಾವಣೆ: ಆಡಳಿತಾರೂಢ ಮಹಾಘಟಬಂಧನ್‌ಗೆ ಆಘಾತ

03:19 PM Dec 08, 2022 | Vishnudas Patil |

ಪಾಟ್ನಾ : ಬಿಹಾರದಲ್ಲಿ ನಡೆದ ಒಂದು ಕ್ಷೇತ್ರದ ವಿಧಾನ ಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ಮಹಾಘಟಬಂಧನ್‌ ಮುಖಭಂಗ ಅನುಭವಿಸಿದ್ದು, ಕುರ್ಹಾನಿ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿದೆ

Advertisement

ಬಿಹಾರದ ಆಡಳಿತಾರೂಢ ಜೆಡಿಯು ಮತ್ತು ಆರ್ ಜೆಡಿ ಮೈತ್ರಿಕೂಟ ಕಣಕ್ಕಿಳಿಸಿದ್ದ ಜೆಡಿಯುನ ಮನೋಜ್ ಸಿಂಗ್ ಕುಶ್ವಾಹಾ ಅವರನ್ನು ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ 3,645 ಮತಗಳಿಂದ ಸೋಲಿಸಿದ್ದಾರೆ. ಅಭ್ಯರ್ಥಿ ಸೋತಿರುವುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹಿನ್ನಡೆಯಾಗಿದೆ. ಬಿಜೆಪಿಯಿಂದ ಮೈತ್ರಿ ಕಡಿದುಕೊಂಡ ಬಳಿಕ ಜೆಡಿಯು ಸೋಲಿನ ಮೂಲಕ ಬಿಜೆಪಿಯಿಂದ ದೊಡ್ಡ ಶಾಕ್ ಪಡೆದಿದೆ. ಕ್ಷೇತ್ರದಲ್ಲಿ ಬಿಹಾರ ಉಪ ಮುಖ್ಯಮಂತ್ರಿ, ಆರ್ ಜೇಡಿ ನಾಯಕ ತೇಜಸ್ವಿ ಯಾದವ್ ಕೂಡ ಭರ್ಜರಿ ಪ್ರಚಾರ ನಡೆಸಿದ್ದರು.

ಆರ್ ಜೆಡಿ ಶಾಸಕ ಅನಿಲ್ ಸಾಹ್ನಿ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. LTC ಹಗರಣ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಕಾರಣ ಸಾಹ್ನಿ ಅವರ ಸದಸ್ಯತ್ವ ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next