ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಟೈಮ್ಸ್ ನೌ-ಸಿಎನ್‌ಎಕ್ಸ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 122 ಸ್ಥಾನಗಳಲ್ಲಿ ಗೆದ್ದು ಬಹುಮತ ಪಡೆಯಲಿದ್ದರೆ, ಕಾಂಗ್ರೆಸ್ 95 ಸ್ಥಾನಗಳಲ್ಲಿ ಗೆದ್ದು ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರಿಯಲಿದೆ. ಬಿಎಸ್‌ಪಿ 3 ಹಾಗೂ ಇತರರು 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಆದರೆ ಬಿಜೆಪಿಯ ಹಾಲಿ ಸಂಖ್ಯಾಬಲ ಕುಸಿಯಲಿದ್ದು, 165 ರಿಂದ 122ಕ್ಕೆ ಕುಸಿಯಲಿದೆ. ಇದೇ ವೇಳೆ ಕಾಂಗ್ರೆಸ್‌ನ ಸಂಖ್ಯಾಬಲವು 58 ರಿಂದ 95ಕ್ಕೆ ಏರಿಕೆಯಾಗಲಿದೆ. ಮತ ಹಂಚಿಕೆ ಶೇ.41.75 ಅಗಿರಲಿದೆ ಎಂದು ಸಮೀಕ್ಷೆ ವರದಿ ಮಾಡಿದ್ದು, 2013ರ ಚುನಾವಣೆಯಲ್ಲಿ ಇದು ಶೇ. 44.88 ಆಗಿತ್ತು. ಆದರೆ ಕಾಂಗ್ರೆಸ್ ಮತ ಹಂಚಿಕೆ ಪ್ರಮಾಣ ಶೇ. 36.38 ರಿಂದ ಶೇ. 38.52ಕ್ಕೆ ಏರಿಕೆಯಾಗಲಿದೆ. ಇದೇ ವೇಳೆ, ಉತ್ತಮ ನಾಯಕರಾಗಿ ಯಾರನ್ನು ಶಿಫಾರಸು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಎಂಬುದಾಗಿ ಶೇ. 56.10 ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ರಾಹುಲ್ ಗಾಂಧಿ ಎಂಬುದಾಗಿ ಶೇ. 34.78 ರಷ್ಟು ಜನರು ಹೇಳಿದ್ದಾರೆ.
ಮಧ್ಯಪ್ರದೇಶ
ಬಿಜೆಪಿ – 122
ಕಾಂಗ್ರೆಸ್ – 95
ಬಿಎಸ್‌ಪಿ – 3
ಇತರ – 10