Advertisement

CAA; ಇಟಾಲಿಯನ್ ಭಾಷೆಗೆ ಅನುವಾದ ಮಾಡಿ ಕೊಡ್ತೇನೆ: ರಾಹುಲ್ ಗೆ ಶಾ ನೇರ ಸವಾಲು

09:58 AM Jan 04, 2020 | Nagendra Trasi |

ಜೋಧ್ ಪುರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಶಾ ನೇರ ಸವಾಲು ಹಾಕಿದ್ದಾರೆ.

Advertisement

“ರಾಹುಲ್ ಬಾಬಾ ಒಂದು ವೇಳೆ ನೀವು ಕಾನೂನು ಓದಿದ್ದರೆ ಸಿಎಎ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆ ನಡೆಸಲು ಸಿದ್ದನಿದ್ದೇನೆ. ಒಂದು ವೇಳೆ ಕಾನೂನು ಓದಲು ಬಾರದಿದ್ದರೆ, ನಾನು ನಿಮಗೆ ಸಹಾಯ ಮಾಡುತ್ತೇನೆ. ಸಿಎಎ ಅನ್ನು ಇಟಾಲಿಯನ್ ಭಾಷೆಗೆ ತರ್ಜುಮೆ ಮಾಡಿ ಕಳುಹಿಸುತ್ತೇನೆ, ದಯವಿಟ್ಟು ಕಾನೂನು ಓದಿ” ಎಂದು ಶಾ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ರಂತಹ ಮಹಾನ್ ವ್ಯಕ್ತಿಗಳ ವಿರುದ್ಧ ಮಾತನಾಡುತ್ತಿವೆ. ಕಾಂಗ್ರೆಸ್ ಮುಖಂಡರಿಗೆ ಇದರಿಂದ ನಾಚಿಕೆಯಾಗಬೇಕು ಎಂದು ಶಾ ಕಿಡಿಕಾರಿದರು.

ಜೋಧ್ ಪುರ್ ನಲ್ಲಿ ಸಿಎಎ ಬೆಂಬಲದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಈ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೂ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಒಂದು ಇಂಚು ಕೂಡಾ ಬದಲಾವಣೆ ಮಾಡಲ್ಲ. ಅದನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next