Advertisement

ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ

04:31 PM Apr 14, 2021 | Team Udayavani |

ಕೊಲ್ಕತ್ತಾ : ಬಿಜೆಪಿ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿಯೂ ಕೂಡ ಗೆಲುವು ಸಾಧಿಸುವುದಿಲ್ಲವೆಂದು ತೃಣ ಮೂಲ ಕಾಂಗ್ರೆಸ್ ನ ನಾಯಕಿ, ಪ.ಬಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಕಿಡಿಕಾರಿದ್ದಾರೆ.

Advertisement

ಜಲ್ಪೈಗುರಿ ಜಿಲ್ಲೆಯ ಡಬ್ಗ್ರಾಮ್ ಫುಲ್ಬಾರಿಯಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಓದಿ : ಭ್ರಷ್ಟಾಚಾರದ ವಿರುದ್ಧ ಸಮರ ಅಸಹಾಯಕ ಹೆಣ್ಣಿನ ಚಿತ್ರ ಸಾರ ಆ್ಯಕ್ಟ್ 1978

ಕೇಸರಿ ಪಕ್ಷ ಈಗಾಗಲೇ ನಡೆದ 4 ಹಂತಗಳ ಚುನಾವಣೆಯಲ್ಲಿನ 135 ಕ್ಷೇತ್ರಗಳಲ್ಲಿ 100 ಕ್ಷೇತ್ರಗಳನ್ನು ಗೆದ್ದಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೇ, ನಾನು ಹೇಳುತ್ತೆನೆ, ಚುನಾವಣೆಯ ಎಲ್ಲಾ ಹಂತಗಳು ಮುಗಿದ ಮೇಲೆ 294 ಕ್ಷೇತ್ರಗಳ ಪೈಕಿಯಲ್ಲಿ 70 ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಜಯ ಸಾಧಿಸುವುದಿಲ್ಲವೆಂದು ಅವರು ಕಿಡಿ ಕಾರಿದ್ದಾರೆ.

ಒಂದೇ ವಿಷಯದ ಬಗ್ಗೆ ವಿವಿಧ ಸ್ಥಳಗಳಲ್ಲಿ ವಿಭಿನ್ನ ವಿಷಯಗಳನ್ನು ಹೇಳುವ ಮೂಲಕ ಬಿಜೆಪಿ ಸುಳ್ಳನ್ನು ಹರಡುತ್ತಿದೆ. ಎನ್‌ ಆರ್‌ ಸಿ ಇರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಡಾರ್ಜಿಲಿಂಗ್‌ ನ ಲೆಬಾಂಗ್‌ ನಲ್ಲಿ ಹೇಳಿದ್ದಾರೆ. ಆದರೆ ರಾಷ್ಟ್ರೀಯ ನಾಗರಿಕ ನೋಂದಣಿ ಅಡಿಯಲ್ಲಿ ಅಕ್ರಮ ವಲಸಿಗರನ್ನು ಹುಡುಕುವ ಪ್ರಕ್ರಿಯೆಯ ಆಧಾರದ ಮೇಲೆ 14 ಲಕ್ಷ ಜನರನ್ನು ಗುರುತಿಸಿ ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ ಎಂದು ಅವರು ಆರೋಪಿಸದ್ದಾರೆ.

Advertisement

ಟಿಎಂಸಿ ಗೆ ನೀವು ಮತ್ತೊಮ್ಮೆ ಅಧಿಕಾರ ಕೊಟ್ಟರೇ, ವಿವಾದಾತ್ಮಕ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ ಆರ್‌ ಸಿ) ಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ನಾವು ಅನುಮತಿಸುವುದಿಲ್ಲ. ನೀವೆಲ್ಲರೂ ನಾಗರಿಕರು, ನೀವು ಟಿಎಂಸಿ ಗೆ ಮತ ಚಲಾಯಿಸ ನಾವು ಅಧಿಕಾರ ಪಡೆಯುವ ಹಾಗೆ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಓದಿ :  ಹೀಗಿರಲಿ ತಾಯಂದಿರ ನವ ಮಾಸದ ಪಯಣ : ಆಹಾರ, ಯೋಗಾಭ್ಯಾಸ

Advertisement

Udayavani is now on Telegram. Click here to join our channel and stay updated with the latest news.

Next