Advertisement

ಪಶ್ಚಿಮ ಬಂಗಾಳ : ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ : ಮಮತಾ ಬ್ಯಾನರ್ಜಿ

12:33 PM Mar 29, 2021 | Team Udayavani |

ಕೋಲ್ಕತ್ತಾ : ಶನಿವಾರ(ಮಾ.27) ಪುರ್ಣಗೊಂಡ ಮೊದಲ ಹಂತದಚುನಾವಣೆಯಲ್ಲಿ ಬಿಜೆಪಿ 30 ಸೀಟುಗಳಲ್ಲಿ 26 ಸೀಟುಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ತೃಣ ಮೂಲ ಕಾಂಗ್ರೆಸ್ ನ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೆಟು ನೀಡಿದ್ದಾರೆ.

Advertisement

ಚಂಡಿಪುರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮಮತಾ, ಯಾಕೆ ಬಿಜೆಪಿ 30 ಕ್ಕೆ 30 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ..? ಉಳಿದ ಸೀಟುಗಳು ಕಾಂಗ್ರೆಸ್ ಮತ್ತು ಸಿಪಿಐಎಮ್ ಗೆ ಬಿಟ್ಟಿದ್ದಾರೆಯೇ..? ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಓದಿ : ತಮಿಳು ನಾಡು : ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ : ಪಳನಿಸ್ವಾಮಿ

ಇನ್ನು,  ಚುನಾವಣೆಗಳಲ್ಲಿ ಮುಕ್ತ ಮತ್ತು ಪ್ರಜಾಪ್ರಭುತ್ವದ ಮತದಾನವನ್ನು ನಡೆಸಲು ಕೇಂದ್ರ ಪಡೆಗಳನ್ನು ಅವರು ಒತ್ತಾಯಿಸಿದರು.

ಮಮತಾ ಅವರಿಗೆ ಸಾಥ್  ನೀಡಿದ ತೃಣ ಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರೆಕ್ ಓ’ಬ್ರಿಯನ್ , ಕೇಂದ್ರ ಗೃಹ ಸಚಿವರನ್ನು ‘ಸುಳ್ಳುಗಾರ’ ಎಂದು ಕರೆದಿದ್ದಾರೆ.

Advertisement

ಏತನ್ಮಧ್ಯೆ, ಕೇಂದ್ರ ಗೃಹ ಸಚಿವರು ಈ ಬಾರಿ ರಾಜ್ಯದ ಬದಲಾವಣೆಗೆ ಬಿಜೆಪಿಗೆ ಮತ ಚಲಾಯಿಸುವಂತೆ ನಂದಿಗ್ರಾಮ್ ನಾಗರಿಕರನ್ನು ಒತ್ತಾಯಿಸಿದರು.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 8 ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಇನ್ನು ಪಶ್ಚಿಮ ಬಂಗಾಳ ಏಳು ಹಂತಗಳ ಚುನಾವಣೆಯನ್ನು ಎದುರು ಕಾಣುತ್ತಿದ್ದು, ಏಪ್ರಿಲ್ 1(30 ಕ್ಷೇತ್ರಗಳು), ಏಪ್ರಿಲ್ 6 (31 ಕ್ಷೇತ್ರಗಳು), ಏಪ್ರಿಲ್ 10 (44 ಕ್ಷೇತ್ರಗಳು) ಏಪ್ರಿಲ್ 17 (45 ಕ್ಷೇತ್ರಗಳು) ಏಪ್ರಿಲ್ 22(43 ಕ್ಷೇತ್ರಗಳು), ಏಪ್ರಿಲ್ 26 (36 ಕ್ಷೇತ್ರಗಳು) ಹಾಗೂ ಏಪ್ರಿಲ್ 29(35 ಕ್ಷೇತ್ರಗಳು) ರಂದು  ಚುನಾವಣೆ ನಡೆಯಲಿದೆ.

ಓದಿ : ಬೆಳಗಾವಿ ರಾಜಕೀಯ: ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next