Advertisement

ಬಿಜೆಪಿಯಿಂದ ಗ್ಯಾರಂಟಿ ಯೋಜನೆ ಸ್ಥಗಿತದ‌ ಹುನ್ನಾರ: ಮುನಿಯಾಲು ಉದಯ ಶೆಟ್ಟಿ

12:26 AM Mar 27, 2024 | Team Udayavani |

ಹೆಬ್ರಿ: ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆ ಗಳು ಬಡವರ ಪಾಲಿಗೆ ಸಂಜೀವಿನಿ ಯಾಗಿದ್ದು, ಈ ಚುನಾವಣೆ ಯಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕಾನೂನು ರೂಪಿಸಿ ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಗೊಳಿಸುವ ಹುನ್ನಾರದಲ್ಲಿದೆ ಎಂದು ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಮಾ.25 ರಂದು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರ ಗಳಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ಮೂಲಕ ಬಡವರ ಪರವಾದ ಕಾಂಗ್ರೆಸ್‌ ಸರಕಾರದ ಜನಪರ ಗ್ಯಾರಂ ಟಿ ಯೋಜನೆಯನ್ನು ಮುಂದು ವರಿ ಸಲು ಕೈ ಜೋಡಿಸಬೇಕು ಎಂದರು.

ಮುಂಬರುವ ಆರ್ಥಿಕ ವರ್ಷದ ಖಾತರಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ 56,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಆದ್ದರಿಂದ ಜನರು ಭಯಪಡಬೇಕಿಲ್ಲ. ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರಗಳಿಗೆ ಕಿವಿ ಗೊಡದೆ ಲೋಕಸಭೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಾ ಅಭಿವೃದ್ಧಿಪರ ಚಿಂತನೆಯ ಪಕ್ಷದ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆಯವರನ್ನು ಬಹುಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಗ್ಯಾರಂಟಿ ಯೋಜನೆ, ಬಡವರ ಪಾಲಿನ ಸಂಜೀವಿನಿ
ಪ್ರಾಮಾಣಿಕವಾಗಿ ದುಡಿದು ಜೀವನ ಸಾಗಿಸಿ ತನ್ನ ಪಾಕೆಟ್‌ನಲ್ಲಿ 200 ರೂ.ಉಳಿಸುವವರಿಗೆ ಮಾತ್ರ ಇಂತಹ ಜನಪರ ಯೋಜನೆ ಸಂಜೀವಿನಿಯಾಗಿ ಅವರ ಕೈಹಿಡಿಯುತ್ತದೆ. ಶ್ರೀಮಂತರು ಮಾತ್ರ ಯೋಜನೆ ಬಗ್ಗೆ ಅನಗತ್ಯ ಮಾತನಾಡುತ್ತಾರೆ. ಅಚ್ಚೆದಿನ್‌ ಅಂದರೆ ಅದು ಕಾಂಗ್ರೆಸ್‌ ಸರಕಾರದಿಂದ ಮಾತ್ರ ಸಾಧ್ಯ ಎಂಬುದು ಜನರಿಗೆ ಅರಿವಾಗಿದೆ ಎಂದರು ಉದಯ ಶೆಟ್ಟಿ. ಕಾಂಗ್ರೆಸ್‌ ತನ್ನ ಮಾತಿನಂತೆ ತಿಂಗಳೊಳಗೆ ಐದು ಖಾತ್ರಿ ಯೋಜನೆಗಳನ್ನು ಜಾರಿಗೆ ತಂದು ಕಡಿಮೆ ಅವಧಿಯಲ್ಲಿ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸಿದ ದೇಶದ ಏಕೈಕ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ 85% ಜನರಿಗೆ ಇದರ ಅವಶ್ಯವಿದ್ದು, ಅನುಕೂಲವಾಗಿದೆ ಎಂದರು.

ಜೀವನಮಟ್ಟ ಸುಧಾರಣೆಗೆ
ಗ್ಯಾರಂಟಿ ಯೋಜನೆ
ಜನರು ಬಡತನದ ಸುಳಿಯಲ್ಲಿ ಸಿಲುಕಬಾರದು ಎಂಬುದು ಕಾಂಗ್ರೆಸ್‌ನ ಕಾಳಜಿಯಾಗಿದ್ದು, ಜನರ ಜೀವನ ಪರಿಸ್ಥಿತಿ ಸುಧಾರಣೆಗೆ ಸಹಾಯ ಮಾಡುವ ಐದು ಖಾತರಿ ಯೋಜನೆಗಳನ್ನು ಮುಂದುವರಿಸಲು ಕಾಂಗ್ರೆಸ್‌ ಅವಶ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಮತ್ತು ಬಡತನವನ್ನು ಕಡಿಮೆ ಮಾಡಲು ಶ್ರಮಿಸುತ್ತಿದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು. ಮುಖಂಡರಾದ ಪ್ರವೀಣ್‌ ಬಲ್ಲಾಳ್‌, ಚಂದ್ರಶೇಖರ್‌ ಬಾಯರಿ, ನವೀನ್‌ ಅಡ್ಡಂತಾಯ ಮೊದಲಾದವರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next