Advertisement

ನ.8: ಬಿಜೆಪಿಯಿಂದ ಎಲ್ಲ ರಾಜ್ಯಗಳಲ್ಲಿ ಕಾಳಧನ ವಿರೋಧಿ ದಿನಾಚರಣೆ

07:04 PM Oct 25, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1,000 ರೂ. ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಒಂದು ವರ್ಷದ ತರುವಾಯ ಭಾರತೀಯ ಜನತಾ ಪಕ್ಷ ನವೆಂಬರ್‌ 8ರಂದು ಎಲ್ಲ ರಾಜ್ಯಗಳಲ್ಲಿ  ಕಪ್ಪು ಹಣ ವಿರೋಧಿ ದಿನವನ್ನು ಆಚರಿಸಲಿದೆ.

Advertisement

“ಕಾಂಗ್ರೆಸ್‌ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಅದು ಕಪ್ಪು ಹಣದ ವಿರುದ್ಧ ಯಾವುದೇ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ” ಎಂದು ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ನವೆಂಬರ್‌ 8ರಂದು ನೋಟು ಅಮಾನ್ಯ ಒಂದು ವರ್ಷ ಪೂರೈಸಲಿದ್ದು ಅಂದು ವಿರೋಧ ಪಕ್ಷಗಳು ದೊಡ್ಡ ಮಟ್ಟದಲ್ಲಿ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿವೆ. ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ದಿಲ್ಲಿಯಲ್ಲಿ ಅಂದು ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಿವೆ. 

ಈ ಬಗ್ಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಂ ನಬಿ ಆಜಾದ್‌ ಅವರನ್ನು ಕಾಂಗ್ರೆಸ್‌ ಪಕ್ಷ, ವಿರೋಧ ಪಕ್ಷೀಯರೊಡನೆ ಸಮಾಲೋಚನೆ ನಡೆಸಿ ಪ್ರತಿಭಟನೆ ಕಾರ್ಯಕ್ರಮ ವೈಖರಿಯನ್ನು ಅಂತಿಮಗೊಳಿಸಿ ಗುರುವಾರ ಬೆಳಗ್ಗೆ 11.30ಕ್ಕೆ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next