Advertisement

ಉತ್ತರ ಪ್ರದೇಶದಲ್ಲಿ ಜಾತಿವಾರು ಪ್ರಚಾರಕ್ಕೆ ಬಿಜೆಪಿ ಸಿದ್ಧತೆ

10:55 PM Oct 03, 2021 | Team Udayavani |

ಲಕ್ನೋ: ಉತ್ತರ ಪ್ರದೇಶ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಜೆಪಿ, ಜಾತಿವಾರು ಪ್ರಚಾರ ನಡೆಸಲು ಯೋಜನೆ ಹಾಕಿಕೊಂಡಿದೆ. 200 ಒಬಿಸಿ ರ್‍ಯಾಲಿ, ಎಸ್‌ಸಿ ಸಮ್ಮೇಳನಗಳನ್ನು ನಡೆಸುವುದಾಗಿ ಪಕ್ಷ ಹೇಳಿಕೊಂಡಿದೆ. ಹಾಗೆಯೇ ಅಲ್ಪಸಂಖ್ಯಾತರ ಮತ ಸೆಳೆಯುವುದಕ್ಕಾಗಿ ವಿಶೇಷ ತಂಡ ರಚಿಸಲು ಮುಂದಾಗಿದೆ.

Advertisement

ಬಿಜೆಪಿ ಪ್ರತಿ ಎರಡು ಕ್ಷೇತ್ರಕ್ಕೆ ಒಂದರಂತೆ ಒಟ್ಟು 202 ರ್ಯಾಲಿಗಳನ್ನು ನಡೆಸಲಿದೆ. ಒಬಿಸಿ ಸಮುದಾಯಗಳಿಗಾಗಿಯೇ ಈ ರ್ಯಾಲಿ ನಡೆಸಲಾಗುವುದು. ಒಬಿಸಿಯ ಉಪ ಜಾತಿಗಳಿಗಾಗಿ 20 ಸಾಮಾಜಿಕ ಸಮ್ಮೇಳನ ನಡೆಸಲಾಗುವುದು. ಎಸ್‌ಸಿ ಮೋರ್ಚಾದವರು 75 ಜಿಲ್ಲೆಗಳಲ್ಲಿ ಅನುಸೂಚಿತ ಜಾತಿ ಸಮ್ಮೇಳನ ನಡೆಸಲಿದ್ದಾರೆ. ಅಲ್ಪಸಂಖ್ಯಾತ ಮೋರ್ಚಾವು ಮುಸ್ಲಿಂ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ 21 ಸದಸ್ಯರ ವಿಶೇಷ ತಂಡ ರಚಿಸುತ್ತಿದ್ದು, ಮತ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್‌? ಸುಲ್ತಾನ್‌ ಅಹ್ಮದ್‌ ಸುಳಿವು

“ಕೈ’ ಕೊಟ್ಟ ಶಾಸಕ?
ಇನ್ನೊಂದೆಡೆ, ಗೋವಾದ ಮಾಜಿ ಸಿಎಂ ಲುಯಿಜಿನ್ಹೊ ಅವರು ಕಾಂಗ್ರೆಸ್‌ ತ್ಯಜಿಸಿ ಟಿಎಂಸಿ ಸೇರಿದ ಬೆನ್ನಲ್ಲೇ ಮತ್ತೊಬ್ಬ ಶಾಸಕ ಅಲೆಕ್ಸೊ  ಲಾರೆಂಕೊ ಪಕ್ಷ ತ್ಯಜಿಸಿ ಎಎಪಿ ಸೇರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡತೊಡಗಿದೆ. ಒಂದು ವೇಳೆ ಹಾಗಾದರೆ ಗೋವಾದಲ್ಲಿ ಕಾಂಗ್ರೆಸ್‌ ಸ್ಥಾನ 3ಕ್ಕೆ ಕುಸಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next