Advertisement
ಗೋವಾ ರಾಜ್ಯದ ಕಲ್ಲಂಗೂಟ್ ಮತ್ತು ವಾಸ್ಕೋ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಚಿವ ಪ್ರಭು ಚವ್ಹಾಣ್, ಬಿಜೆಪಿಯು ಗೋವಾದಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಿದೆ. ಗೋವಾ ಸಮಗ್ರ ಅಭಿವೃದ್ಧಿಯೇ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದರು.
Related Articles
Advertisement
ಮುಖ್ಯಮಂತ್ರಿ ಪ್ರಮೊದ್ ಸಾವಂತ್ ಗೋವಾ ರಾಜ್ಯವನ್ನು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ರೀತಿಯಲ್ಲಿ ಕೆಲಸ ಮಾಡಿದ್ದಾ ರೆ. ಗೋವಾದಲ್ಲಿ ಫ್ಲೈ ಓವರ್, ಐಐಟಿ, ವೈದ್ಯಕೀಯ ಕಾಲೇಜು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಯಾಗಲಿರುವ ಏರ್‌ಪೋರ್ಟ್ ಸೇರಿದಂತೆ ಗೋವಾ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದರಿಂದ ಇಲ್ಲಿನ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ ಎಂದು ಪ್ರಭು ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಲಂಗೂಟ್ ಕ್ಷೇತ್ರದ ಅಭ್ಯರ್ಥಿ ಜೋಸೇಫ್ ಸಿಕ್ವೇರಾ ಮತ್ತು ವಾಸ್ಕೋ ಅಭ್ಯರ್ಥಿ ಕೃಷ್ಣಾ ಸಾಲ್ಕರ್ ಅವರ ಪರವಾಗಿ ಪ್ರಚಾರ ನಡೆಸಿದ ಪ್ರಭು ಚವ್ಹಾಣ್ ಅವರು, ಗೋವಾ ಕನ್ನಡಿಗರು ಹಾಗೂ ಬಂಜಾರ ಸಮುದಾಯದ ಪ್ರಮುಖ ಮುಖಂಡರುಗಳೊಂದಿಗೆ ಸಭೆ ನಡೆಸುವ ಮೂಲಕ ಅಬ್ಬರದ ಪ್ರಚಾರ ಮೂಲಕ ಗಮನ ಸೆಳೆದರು.