Advertisement

ಅಮಿತ್‌ ಶಾ ಮಾರ್ಗದರ್ಶನಲ್ಲಿ ಲೋಕಸಭಾ ಚುನಾವಣೆ ಹೋರಾಟ: ಬಿಜೆಪಿ

07:29 PM Sep 08, 2018 | Team Udayavani |

ಹೊಸದಿಲ್ಲಿ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಆಳುವ ಭಾರತೀಯ ಜನತಾ ಪಕ್ಷ ಇಂದು ಶನಿವಾರ ತನ್ನ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿತು ಮತ್ತು ಅವರ ಮಾರ್ಗದರ್ಶನದಲ್ಲೇ 2019ರ ನಿರ್ಣಾಯಕ  ಲೋಕಸಭಾ ಚುನಾವಣೆಗಳನ್ನು  ಹೋರಾಡಲು ನಿರ್ಧರಿಸಿತು.

Advertisement

2019ರ ಲೋಕಸಭಾಚುನಾವಣೆಯ ವರೆಗೆ ಸಾಂಸ್ಥಿಕ ಚುನಾವಣೆಗಳನ್ನು ಮುಂದೂಡಲು ಕೂಡ ಪಕ್ಷ ನಿರ್ಧರಿಸಿತು. ಆ ಮೂಲಕ ವರ್ಷಾಂತ್ಯ ಎದುರಾಗುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು 2019ರ ಲೋಕಸಭಾ ಚುನಾವಣೆಗಳಿಗೆ ಪೂರ್ಣ ಮಹತ್ವ ನೀಡಲು ಸಾಧ್ಯವಾಗುವುದೆಂದು ಅಭಿಪ್ರಾಯಪಟ್ಟಿತು. 

 ಇಲ್ಲಿನ ಅಂಬೇಡ್ಕರ್‌ ಇಂಟರ್‌ನ್ಯಾಶನಲ್‌ ಸೆಂಟರ್‌ನಲ್ಲಿ ಔಪಚಾರಿಕವಾಗಿ ಆರಂಭಗೊಂಡಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ  ಈ ಕುರಿತಾದ ಠರಾವುಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next