ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಎನ್. ಮಹೇಶ್‌ಗೆ ಟಿಕೆಟ್ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಪರೋಕ್ಷವಾಗಿ ತಿಳಿಸಿದರು.
ಬುಧವಾರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದ ವಿರಕ್ತಮಠದ ನೂತನ ಕಟ್ಟಡ, ಬಸವಭವನ, ಬಸವದ್ವಾರ, ಪ್ರಸಾದ ನಿಲಯ, ಮಹಾಂತಸ್ವಾಮಿಗಳು, ಸಿದ್ಧಲಿಂಗಸವಾಮಿಗಳ ಗದ್ದುಗೆಗಳಿಗೆ ಲಿಂಗ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳ ಬೃಹತ್ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹೇಶ್ ತುಂಬಾ ಪ್ರಜ್ಞಾವಂತ ಶಾಸಕರಾಗಿದ್ದಾರೆ. ವಿಧಾನಸಭೆಯಲ್ಲಿ ಇವರು ಮಾತನಾಡಲು ನಿಂತರೆ ಮೌನ ಆವರಿಸುತ್ತದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿರುವುದು ಈ ಭಾಗದ ಜನರು ಪ್ರಜ್ಞಾವಂತಿಕೆಗೆ ಸಾಕ್ಷಿಯಾಗಿದೆ. ಇವರ ಮೇಲೆ ಇಲ್ಲಿನ ಮತದಾರರು ನಿರೀಕ್ಷೆಯನ್ನು ಇಟ್ಟಿದ್ದು ಇವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇವರಿಗೆ ಆಶೀರ್ವದಿಸಿ, ಹರಸಿ ಎಂದು ಮನವಿ ಮಾಡಿದರು. ಇದಕ್ಕೆ ಅಲ್ಲಿ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆಗಳ ಸುರಿಮಳೆಗೈದು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ, ವಾಟಾಳು ಶ್ರೀ, ಕುಂದೂರು ಮಠದ ಶ್ರೀ, ದೇಗುಲ ಮಠದ ಶ್ರೀ ಮತ್ತು ಶಾಸಕ ಎನ್ ಮಹೇಶ್ ಉಪಸ್ಥಿತರಿದ್ದರು.
ಈ ವಿಷಯದಲ್ಲಿ ಅಲ್ಲಲ್ಲಿ ಸಾಕಷ್ಟು ಚರ್ಚೆಗಳು ನಡೆಯಿತು. ಕ್ಷೇತ್ರಾದ್ಯಂತ ಈ ಸುದ್ದಿ ಹಡರಡುತ್ತಿದ್ದಂತೆಯೇ ಮುಂದಿನ ವಿಧಾನಸಭೆಯ ಬಿಜೆಪಿ ಟಿಕೆಟ್ ಎನ್. ಮಹೇಶ್‌ಗೆ ನೀಡಿದರೆ ಪಕ್ಷದ ನಿಷ್ಠಾಂತರ ಗತಿಯೇನು ಎಂಬ ಬಗ್ಗೆ ರಾಜಕೀಯ ಗುಸುಗುಸು, ಚರ್ಚೆಗೆ ಈ ವಿಷಯ ಗ್ರಾಸವಾಗಿದೆ.