Advertisement

Karthik Mahesh: ಬಿಗ್‌ ಬಾಸ್‌ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್‌ ಮಹೇಶ್

10:52 AM Apr 22, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 ವಿನ್ನರ್‌ ಕಾರ್ತಿಕ್‌ ಮಹೇಶ್‌ ಸದ್ಯ ಬ್ಯುಸಿಯಾಗಿದ್ದಾರೆ. ಬಿಗ್‌ ಬಾಸ್‌ ಬಳಿಕ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Advertisement

ಜಾಹೀರಾತು ಶೂಟ್‌, ಈವೆಂಟ್‌ ಹೀಗೆ ನಾನಾ ಕೆಲಸದಲ್ಲಿ ಕಾರ್ತಿಕ್‌ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಒಳ್ಳೆ ಸ್ಕ್ರಿಪ್ಟ್‌ ಗಾಗಿ ಅವರು ಕಾಯುತ್ತಿದ್ದಾರೆ. ಬಿಗ್‌ ಬಾಸ್‌ ನಲ್ಲಿ ಗೆದ್ದ ಹಣದಿಂದ  ಕಾರ್ತಿಕ್‌ ಅವರು ಮನೆ ಕಟ್ಟಬೇಕೆಂದುಕೊಂಡಿದ್ದರು. ಸದ್ಯ ಅವರು ಬಿಗ್‌ ಬಾಸ್‌ ನಿಂದ ಬಂದ ಪ್ರೈಜ್‌ ಮನಿ ಬಗ್ಗೆ ಮಾತನಾಡಿರುವುದು ಸದ್ದು ಮಾಡಿದೆ.

ಬಿಗ್‌ ಬಾಸ್‌ ನಲ್ಲಿ ಗೆದ್ದ ಕಾರ್ತಿಕ್‌ ಅವರಿಗೆ 50 ಲಕ್ಷ ರೂಪಾಯಿ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್, ಕಾರು ಕೊಡುವುದಾಗಿ ಘೋಷಣೆ ಆಗಿತ್ತು. ಈ ಪೈಕಿ ಈಗಾಗಲೇ ಬೈಕ್ ಅವರ ಮನೆ ಸೇರಿದೆ. ಮಾರುತಿ ಸುಜುಕಿ ಬ್ರೇಜಾ ಕಾರು ಅವರಿಗೆ ಸಿಗಬೇಕಿತ್ತು. ಆದರೆ, ಇದಕ್ಕೆ ಮತ್ತಷ್ಟು ಸಮಯ ಹಿಡಿಯಲಿದೆಯಂತೆ ಎಂದು ಕಾರ್ತಿಕ್‌ ಅವರು ಹೇಳಿದ್ದಾರೆ.

ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕು. ಇದಕ್ಕೆ ಇನ್ನೂ ಟೈಮ್‌ ತಗೊಳ್ಳುತ್ತೆ.  ಮನೆ ನೋಡ್ತಾ ಇದ್ದೇನೆ. ಬಿಗ್ ಬಾಸ್ʼನಿಂದ ಬಂದ ಹಣದಲ್ಲಿ ಮನೆ ಕಟ್ಟಲು ಆಗಲ್ಲ. ಬೆಂಗಳೂರಲ್ಲಿ ಮನೆ ಕಟ್ಟಬೇಕು ಎಂದರೆ ಬಿಗ್ ಬಾಸ್ ಹಣ ಎಲ್ಲಿಯೂ ಸಾಕಾಗಲ್ಲ. ನಾನು ಸಹ ದುಡಿಬೇಕು ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ.

ಬಿಗ್‌ ಬಾಸ್‌ ನಲ್ಲಿ 50 ಲಕ್ಷ ಗೆದ್ದಿದ್ದೇನೆ ನಿಜ. ಅದರೆ ಅದರಲ್ಲಿ ಪೂರ್ತಿ 50 ಲಕ್ಷ ನಮ್ಮ ಕೈ ಸೇರಿಲ್ಲ. 35 ಲಕ್ಷ ರೂಪಾಯಿ ಮಾತ್ರ ಬರುತ್ತದೆ. 15 ಲಕ್ಷ ರೂಪಾಯಿ ಟ್ಯಾಕ್ಸ್​ ಡಿಡೆಕ್ಟ್‌ ಆಗುತ್ತದೆ. ಹಂತ ಹಂತವಾಗಿ ಹಣ ಬಂದು ಕೈ ಸೇರುತ್ತಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next