Advertisement

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

07:24 PM Apr 27, 2024 | Team Udayavani |

ಮುಂಬೈ:26/11 ಮುಂಬೈ ಭಯೋತ್ಪಾದನಾ ದಾಳಿಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ಉಜ್ವಲ್‌ ನಿಕಮ್‌ ಅವರನ್ನು ಭಾರತೀಯ ಜನತಾ ಪಕ್ಷ ಮುಂಬೈ ಉತ್ತರ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.‌

Advertisement

ಇದನ್ನೂ ಓದಿ:Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

ಮುಂಬೈ ಉತ್ತರ ಸೆಂಟ್ರಲ್‌ ಕ್ಷೇತ್ರದ ಹಾಲಿ ಸಂಸದೆ ಪೂನಮ್‌ ಮಹಾಜನ್‌ ಅವರನ್ನು ಕೈಬಿಟ್ಟು, ಹಿರಿಯ ವಕೀಲ ಉಜ್ವಲ್‌ ನಿಕಮ್‌ ಅವರಿಗೆ ಟಿಕೆಟ್‌ ನೀಡಿ ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.

ಮಾಜಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಮ್‌ ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ವರ್ಷಾ ಗಾಯಕ್ವಾಡ್‌ ಅವರನ್ನು ಎದುರಿಸಲಿದ್ದಾರೆ.

26/11ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಮ್‌ ಅವರು ಮುಂಬೈ ದಾಳಿ ವಿಚಾರಣೆ ವೇಳೆ ರಾಜ್ಯದ ಪರವಾಗಿ ವಾದ ಮಂಡಿಸಿದ್ದರು. 2016ರಲ್ಲಿ ಭಾರತ ಸರ್ಕಾರ ನಿಕಮ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

Advertisement

ಉಜ್ವಲ್‌ ನಿಕಮ್‌ ಅವರು ಜಲಗಾಂವ್‌ ನಲ್ಲಿ ಜಿಲ್ಲಾ ಪ್ರಾಸಿಕ್ಯೂಟರ್‌ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ 628 ಜೀವಾವಧಿ ಶಿಕ್ಷೆ, 37 ಮರಣದಂಡನೆ ಶಿಕ್ಷೆ ಕೊಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. (ಮರಣದಂಡನೆ ಶಿಕ್ಷೆ ನಂತರ ಜೀವಾವಧಿಗೆ ಇಳಿಕೆಯಾದ ಪ್ರಕರಣಗಳೂ ಸೇರಿವೆ.)

“ನಾನು ರಾಜಕೀಯವನ್ನು ಹೋರಾಟ ಎಂದು ಪರಿಗಣಿಸುವುದಿಲ್ಲ, ರಾಜಕೀಯದ ಮೂಲಕ ಸಮಾಜ ಸೇವೆ ಮಾಡಬಹುದು, ರಾಜಕೀಯದ ಮೂಲಕ ರಾಷ್ಟ್ರ ಸೇವೆ ಮಾಡಬಹುದು. ನಾನು ರಾಜಕೀಯದ ಮೂಲಕ ರಾಷ್ಟ್ರ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಹಾಗಾಗಿ ನನ್ನ ಅದೃಷ್ಟವೆಂದು ಪರಿಗಣಿಸುತ್ತೇನೆ” ಎಂದು  ಉಜ್ವಲ್‌ ನಿಕಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next