Advertisement

JDSನಿಂದ ಅಂತರಕ್ಕೆ ಬಿಜೆಪಿ ಚಿಂತನೆ? ಶಾ-ಎಚ್‌ಡಿಕೆ ಭೇಟಿ ಇಲ್ಲ

01:13 AM May 06, 2024 | Team Udayavani |

ಬೆಂಗಳೂರು: ಕಿಡ್ನಾಪ್‌ ಪ್ರಕರಣದಲ್ಲಿ ಸೋದರ ಎಚ್‌.ಡಿ. ರೇವಣ್ಣ ಬಂಧನ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒಂದೇ ಖಾಸಗಿ ಹೊಟೇಲ್‌ನಲ್ಲಿದ್ದರೂ ಪರಸ್ಪರ ಭೇಟಿ ಮಾಡದೆ ಇರುವುದು ಈಗ ಮೈತ್ರಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಅಮಿತ್‌ ಶಾ ವಾಸ್ತವ್ಯವಿದ್ದ ಹೊಟೇಲ್‌ಗೆ ಆಗಮಿಸಿದ್ದ ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿ ಮಾಡುವ ಆಶಯ ಹೊಂದಿದ್ದರು ಎನ್ನಲಾಗಿದೆ. ಆದರೆ ಅದೇ ಸಮಯಕ್ಕೆ ರೇವಣ್ಣ ಬಂಧನವಾಗಿದ್ದರಿಂದ ರಾಜಕೀಯ ಚರ್ಚೆ ಬೇರೆ ಸ್ವರೂಪ ಪಡೆದುಕೊಂಡಿತು. ಈ ಹಂತದಲ್ಲಿ ಭೇಟಿಯಾದರೆ ಕಾಂಗ್ರೆಸ್‌ ಕೈಗೆ ಹೊಸ ಅಸ್ತ್ರ ನೀಡಬಹುದೆಂಬ ಕಾರಣಕ್ಕೆ ಇಬ್ಬರೂ ಅಂತರ ಕಾಯ್ದುಕೊಂಡರು ಎಂದು ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಜೆಡಿಎಸ್‌ ಮೂಲಗಳ ಪ್ರಕಾರ, ಶಾ ಹೊಟೇಲ್‌ಗೆ ಆಗಮಿ ಸಿದ ಹತ್ತೇ ನಿಮಿಷದಲ್ಲಿ ಕುಮಾರಸ್ವಾಮಿ ಅಲ್ಲಿಂದ ತೆರಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್‌ ಜತೆ ಗುರುತಿಸಿಕೊಂಡರೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯಬಹುದೆಂಬ ಕಾರಣಕ್ಕೆ ರಾಷ್ಟ್ರೀಯ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಯ ಭವಿಷ್ಯದ ಬಗ್ಗೆಯೂ ಹಲವು ಪ್ರಶ್ನೆಗಳು ಉದ್ಭವವಾಗಿದೆ. ಆದರೆ ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತ್ರ ಅಮಿತ್‌ ಶಾ ಹಾಗೂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಏನು ಚರ್ಚೆ ನಡೆದಿದೆಯೋ ಗೊತ್ತಿಲ್ಲ ಎಂದು ಹೇಳಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next